ಸಮಾಜದ ಹಿತದೃಷ್ಟಿ ಹಾಗೂ ಗ್ರಾಮಗಳ ಅಭಿವೃದ್ಧಿಯತ್ತ ನಾಮಧಾರಿ ಮಿತ್ರ ಬಳಗ
ಭಟ್ಕಳ : ನಾಮಧಾರಿ ಸಮಾಜದ ಬಗೆಗೆ ಚಿಂತಿಸುತ್ತಿದ್ದ ಸ್ಥಳೀಯ ನಾಮಧಾರಿ ಮಿತ್ರ ಬಳಗವು ಇಗ ತಾಲೂಕಿನಾದ್ಯಂತ ಅತೀ ವೇಗವಾಗಿ ಹರಡುತ್ತಿರುವ ಮಾರಣಾಂತಿಕ ಕಾಯಿಲೆಗಳನ್ನು ಮನಗೊಂಡು ಅದರಲ್ಲಿಯೂ ಮುಖ್ಯವಾಗಿ ಡೆಂಗ್ಯೂ ಜ್ವರ,ಹಾಗೂ ಹೆಚ್1,ಎನ್1 ಜ್ವರದಂತಹ ಮಹಾಮಾರಿ ಕಾಯಿಲೆಗಳನ್ನು ತಡೆಯಲು ತಾಲೂಕಿನಾದ್ಯಂತ ಸ್ವಚ್ಛತೆ ಹಾಗೂ ಸೊಳ್ಳೆ ನಿಯಂತ್ರಣ ಔಷಧಿ ಸಿಂಪಡಿಸುದರ ಬಗೆಗೆ ತಾಲ್ಲೂಕು ಪಂಚಾಯತ ಹಾಗೂ ಗ್ರಾಮ ಪಂಚಾಯತಗಳ ಮೂಲಕ ಆರೋಗ್ಯ ಇಲಾಖೆಗಳಿಗೆ ಆದೇಶ ನೀಡಿ ತಕ್ಷಣ ಕ್ರಮ ಕೈಗೊಳ್ಳಬೇಕೇಂದು ಜುಲೈ 20 ರಂದು ಮನವಿ ಸಲ್ಲಿಸಿದರು.
ಶಿರಾಲಿ- ರಾಷ್ಟ್ರೀಯ ಹೆದ್ದಾರಿ ಕೋಟೆಬಾಗಿಲ ಕ್ರಾಸ್ ನಲ್ಲಿ ಕೆಲವು ವ್ಯಾಪಾರಸ್ಥರು ಮತ್ತು ನಿವಾಸಿಗಳು ಯಥೇಚ್ಛವಾಗಿ ತ್ಯಾಜ್ಯ ಹಾಗೂ ಗಲೀಜು ವಸ್ತುಗಳನ್ನು ಇಲ್ಲಿ ತಂದು ಹಾಕುತ್ತಿದ್ದಾರೆ, ಇದರಿಂದ ಕೆಟ್ಟ ವಾಸನೆ ಪ್ರಾರಂಭವಾಗಿದೆ, ಹೀಗೆ ಇದು ಮುಂದುವರಿದಲ್ಲಿ ರೋಗ ರೋಜಿನಗಳು ಹರಡಲು ದಾರಿ ಮಾಡಿಕೊಟ್ಟಂತಾದಿತು, ಈ ಪ್ರದೇಶದಲ್ಲಿ ತ್ಯಾಜ್ಯ ವಸ್ತು ನಿರ್ವಹಣೆಗೆ ಯಾವುದೇ ನಿರ್ವಹಣೆ ಇಲ್ಲ, ಹೀಗಾಗಿ ಈ ಭಾಗದಲ್ಲಿರುವ ತ್ಯಾಜ್ಯ ವಸ್ತುಗಳನ್ನು ಆದಷ್ಟು ಬೇಗ ವಿಲೇವಾರಿ ಮಾಡಬೇಕು, ತ್ಯಾಜ್ಯ ವಸ್ತುಗಳನ್ನು ಹಾಕಲು ಸರಿಯಾದ ಸ್ಥಳ ನಿಗದಿಪಡಿಸಬೇಕು ಹಾಗೂ ವ್ಯಾಪಾರಸ್ಥರು ಮತ್ತು ಅಕ್ಕ ಪಕ್ಕದ ನಿವಾಸಿಗಳು ತ್ಯಾಜ್ಯ ವಸ್ತುಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕು ಹಾಗೆಯೇ ಶಿರಾಲಿ ಬಝಾರನಲ್ಲಿ ಈ ತನಕ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಇರುವುದಿಲ್ಲ ಹೀಗಾಗಿ ನಮ್ಮ ಶಿರಾಲಿಯ ಬಝಾರನಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಒದಗಿಸಬೇಕೆಂದು ನಾಮಧಾರಿ ಮಿತ್ರ ಬಳಗವು ಸ್ಥಳೀಯ ವ್ಯಾಪಾರಸ್ಥರ,ಸಾರ್ವಜನಿಕರ ಹಾಗೂ ಆಟೋ ಚಾಲಕರ ಜೊತೆ ಸೇರಿ ಶಿರಾಲಿ ಗ್ರಾಮ ಪಂಚಾಯತ ಅಧ್ಯಕ್ಷರ ಹಾಗೂ ಪಿ.ಡಿ.ಓ ಸಮ್ಮುಖದಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಮಧಾರಿ ಮಿತ್ರ ಬಳಗದ ಅಧ್ಯಕ್ಷರು ರಾಜೀವ ನಾಯ್ಕ , ಮಿತ್ರ ಬಳಗದ ಸದಸ್ಯರು , ಸ್ಥಳೀಯ ವ್ಯಾಪಾರಸ್ಥರು,ಆಟೊ ಚಾಲಕರು ಉಪಸ್ಥಿತರಿದ್ದರು.