ಬಸ್ ಉರುಳಿ 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಹೊನ್ನಾವರ : ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಚಾಲಕನ ನಿಯತ್ರಣ ತಪ್ಪಿ ರಸ್ತೆಯ ಬದಿಗೆ ಉರುಳಿದ್ದರ ಪರಿಣಾಮ 25 ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾದ ಘಟನೆ ಹೊನ್ನಾವರದ ಕಡಗೇರಿ ಘಾಟ್ ಬಳಿ ನಡೆದಿದೆ.
ಹೊನ್ನಾವರದಿಂದ ಮಾವಿನಕುರ್ವಾಗೆ ಹೊರಟ್ಟಿದ್ದ ಬಸ್ ಕಡಗೇರಿ ಘಾಟ್ ಬಳಿ ಅಪಘಾತಕ್ಕೀಡಾಗಿದೆ. ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 25 ಜನರು ಗಂಭೀರವಾಗಿ ಗಾಯಗೊಡಿದ್ದಾರೆ. ಗಾಯಾಳುಗಳನ್ನು ಹೊನ್ನಾವರ ಆಸ್ಪತ್ರೆಗೆ ದಾಖಲಿಸಲಾಗಿದೆ, ಗಾಯಾಳುಗಳ ವಿವರ ಲಭ್ಯವಾಗಿಲ್ಲ.
ಹೊನ್ನಾವರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.