ಯುವ ಜನತಾದಳ ಉತ್ತರಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗಜಾನನ ಆರ್ ನಾಯ್ಕ
ಅಂಕೋಲ : ಯುವ ಜನತಾದಳ ಉತ್ತರಕನ್ನಡ ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಗಜಾನನ ಆರ್ ನಾಯ್ಕ.ಬೊಬ್ರುವಾಡ ಅಂಕೋಲಾ ಆಯ್ಕೆಯಾಗಿದ್ದಾರೆ. ಈ ಕುರಿತು ಆದೇಶ ಹೊರಡಿಸಿ ಯುವ ಜನತಾದಳ ರಾಜ್ಯಾಧ್ಯಕ್ಷ ಹಾಗೂ ಶಾಸಕರಾದ ಮಧು ಬಂಗಾರಪ್ಪರವರು ತಮ್ಮ ಬೆಂಗಳೂರಿನ ಖಚೇರಿಯಲ್ಲಿ ಗಜಾನನ ನಾಯ್ಕರಿಗೆ ಪ್ರಮಾಣ ಪತ್ರವನ್ನು ನೀಡಿ ಶುಭಕೋರಿದರು. ಜೆಡಿಎಸ್ ಮುಖಂಡರಾದ ಮಂಜುನಾಥ ನಾಯ್ಕರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಂಕೋಲಾ ತಾಲೂಕಿನ ಬೊಬ್ರವಾಡದ ಗ್ರಾಮಪಂಚಾಯತ ಸದಸ್ಯರೂ ಆದ ಗಜಾನನ ನಾಯ್ಕರವರು ಈ ಕುರಿತು ಸಂತೋಷ ವ್ಯಕ್ತಪಡಿಸಿ ತಮ್ಮೆಲ್ಲ ಹಿತೈಷಿಗಳಿಗೆ ಧನ್ಯವಾದ ತಿಳಿಸಿ ಕ್ಷೇತ್ರದ ಜನರ ಎಲ್ಲ ಸಮಸ್ಯಗಳಿಗೆ ಪರಿಹಾರ ಹುಡುಕಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.