logo logo

ದೂರದರ್ಶನ ಚಂದನದಲ್ಲಿ ಉಮೇಶ್ ಮುಂಡಳ್ಳಿ ಮದುರ ಗಾನ

ಭಟ್ಕಳ : ಕನ್ನಡ ವಾಹಿನಿ ದೂರದರ್ಶನ ಚಂದನದ ಜನಪ್ರಿಯ ಕಾರ್ಯಕ್ರಮವಾದ ಮದುರ ಮಧುರವೀ ಮಂಜುಳಗಾನ.. ಕಾರ್ಯಕ್ರಮದಲ್ಲಿ ಭಟ್ಕಳದ ಯುವ ಸಾಹಿತಿ ಹಾಗೂ ಗಾಯಕರಾದ ಶ್ರೀ ಉಮೇಶ್ ಮುಂಡಳ್ಳಿ ಹಾಡಿರುವ ಕಾರ್ಯಕ್ರಮ ಪ್ರಸಾರವಾಗಿದ್ದು ನಮ್ಮ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ. ಈ ಕಾರ್ಯಕ್ರಮದ ಹಾಡುಗಳನ್ನು ನಿನ್ನೆ ರಾತ್ರಿ 10 ಗಂಟೆಗೆ ಪ್ರಸಾರವಾಗಿದ್ದು ಇಂದು ಸೋಮವಾರ ಮಧ್ಯಾಹ್ನ 02:30 ಕ್ಕೆ ಮರುಪ್ರಸಾರವಾಗಲಿದೆ.
ಕುಂದಾಪುರದಲ್ಲಿ ಇತ್ತೀಚಿಗೆ ನಡೆದ ಕಾರ್ಯಕ್ರಮವೊಂದರಲ್ಲಿ ಉಮೇಶರವರು ಮೂರೂ ಹಾಡನ್ನು ಹಾಡಿದ್ದು ಚಿತ್ರೀಕರಣಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಇತರೆ ಹಾಡುಗಳೊಂದಿಗೆ ಶೀರ್ಷಿಕೆಯಿರುವ " ಇಂದಿನ ನಾಯಕರ ವಿಶೇಷ "ಎಂಬ ಪ್ರಮುಖ ಹಾಡನ್ನೂ ಇವರೇ ಹಾಡಿರುವುದು ಪ್ರಾಮುಖ್ಯತೆಯನ್ನು ಪಡೆದಿರುತ್ತದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್