ಮಾಜಿ ಸಂಸದ ದೇವರಾಯ ನಾಯ್ಕ ನಿಧನ
ಸಿರ್ಸಿ : ಮಾಜಿ ಕೆನರಾ ಸಂಸದರು ಹಾಗೂ ಸಮಾಜದ ರಾಜಕೀಯ ಮುಖಂಡರಾದ ಜಿ. ದೇವರಾಯ ನಾಯ್ಕ, 70 ವರ್ಷ ನಿನ್ನೆ ದಿನಾಂಕ 12-7-2017 ರಂದು ಶಿರಸಿಯ ಯಲ್ಲಾಪುರ ನಾಕಾ ಹತ್ತಿರ ಇರುವ ತಮ್ಮ ಮನೆಯಲ್ಲಿ 15-30 ಗಂಟೆಗೆ ನಿಧನರಾಗಿರುತ್ತಾರೆ, ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೂಲತಃ ಸಿದ್ದಾಪುರ ತಾಲೂಕಿನ ಗವಿನಗುಡ್ಡದವರಾಗಿದ್ದ ದೇವರಾಯ ನಾಯ್ಕರು ನಂತರ ಶಿರಸಿಯಲ್ಲಿ ನೆಲೆಸಿದ್ದರು. ಅಂತ್ಯಕ್ರಿಯೆ ಇವರ ಹುಟ್ಟೂರಾದ ಗವಿನಗುಡ್ಡದಲ್ಲಿ ನಡೆಯಲಿದೆ.
ಕೆನರಾ ಕ್ಷೇತ್ರದಿಂದ 1980 ರಿಂದ 1996 ರ ವರೆಗೆ ಸತತ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಇವರು ಈಗಿನ ಬೃಹತ್ ಕೈಗಾರಿಕೆ ಸಚಿವ ಆರ್.ವಿ. ದೇಶಪಾಂಡೆ, ಸಾಹಿತಿ ಶಿವರಾಂ ಕಾರಂತ ರಂತಹ ಅನೇಕ ನಾಯಕರನ್ನು ಚುನಾವಣೆಯಲ್ಲಿ ಸೋಲಿಸಿ ಆರಿಸಿ ಬಂದವರೆಂಬುದು ಇವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪರವರ ನಿಕಟವರ್ತಿಯಾಗಿದ್ದ ಇವರು ರಾಷ್ಟ್ರೀಯ ನಾಯಕರೊಂದಿಗೂ ಉತ್ತಮ ಬಾಂದವ್ಯಹೊಂದಿದ್ದರು.