ಅಂಕೋಲದಲ್ಲಿ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ಕಾರ್ಯಾಗಾರದ ಪೂರ್ವ ಸಿದ್ದತಾ ಸಭೆ
ಅಂಕೋಲ : " ನಾಗರಿಕ ಸೇವೆಗಳು ಗಗನ ಕುಸುಮವಲ್ಲ " ಇದರ ಪೂರ್ವ ಸಿದ್ದತಾ ಸಭೆ 15ನೇ ಜುಲೈ 2017, ಶನಿವಾರ ಅಂಕೋಲದಲ್ಲಿ ಹಮ್ಮಿಕೊಳ್ಳಲಾಗಿದೆ. ಕನ್ನಡಿಗರನ್ನು ಅದರಲ್ಲೂ ಕರಾವಳಿಯಲ್ಲಿ ನಾಗರೀಕ ಸೇವಾ ಆಯೋಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಈ ಕಾರ್ಯಾಗಾರ ನಡೆಸಲಾಗುತ್ತಿದೆ. ಐ.ಎ.ಎಸ್./ಐ.ಎಫ್.ಎಸ್./ಐ.ಪಿ.ಎಸ್. ವಿಧ್ಯಾರ್ಥಿಗಳಿಗಾಗಿ/ನಾಗರಿಕ ಸೇವಾ ಆಕಾಂಕ್ಷಿಗಳಿಗಾಗಿ ಮಾರ್ಗದರ್ಶನ, ತರಭೇತಿ ಮತ್ತು ಸಂವಾದ ಕಾರ್ಯಕ್ರಮ ಅಂಕೋಲದ ಬಸ್ ಸ್ಟಾಂಡ್ ಬಳಿ ಇರುವ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಸಭಾಭವನದಲ್ಲಿ ಮದ್ಯಾಹ್ನ 2.30 ಗಂಟೆಯಿಂದ ಸಂಜೆ ಮದ್ಯಾಹ್ನ 4.15 ಗಂಟೆವರೆಗೆ ನಡೆಯಲಿದೆ.
ನಾಗರೀಕ ಸೇವೆಗಳು ಗಗನ ಕುಸುಮವಲ್ಲ (ಒಂದು ದಿನದ ಬೃಹತ್ ಮಾರ್ಗದರ್ಶನ, ತರಭೇತಿ ಮತ್ತು ಸಂವಾದ ಕಾರ್ಯಾಗಾರ) ಹಾಗೂ ವಿವಿಧ ಕ್ಷೇತ್ರಗಳ 50 ಅಂತರಾಷ್ಟರೀಯ ಮಟ್ಟದ ಯುವ ಸಾಧಕರುಗಳಿಗೆ ಸನ್ಮಾನ (24.09.2017, ಭಾನುವಾರ) ಇದರ ಪೂರ್ವ ಸಿದ್ದತಾ ಸಭೆ
ಈ ಕಾರ್ಯಕ್ರಮದಲ್ಲಿ
1. ಡಾ. ತೇಜಸ್ವಿ ನಾಯ್ಕ., IAS (2009 Batch), DC, ಮಧ್ಯಪ್ರದೇಶ
2. ಶ್ರೀ ರಾಜೇಶ ನಾಯ್ಕ., IFS (2010 Batch), ಆರ್.ಪಿ.ಒ, ಬೆಂಗಳೂರು ಮತ್ತು ಜಪಾನಿನ ಪೂರ್ವ ಅಧೀನ ರಾಯಬಾರಿ
3. ಶ್ರೀ ಕಾರ್ತಿಕ ಕಶ್ಯಪ್., IPS (2009 Batch), SP North Goa
4. ಶ್ರೀ ವಸಂತ ರೆಡ್ಡಿ., IFS (2008 batch) DCF, ಹೊನ್ನಾವರ, ಕರ್ನಾಟಕ
5. ಶ್ರೀ ದಾಮೋದರ ಎ.ಟಿ., IFS (2010 Batch), DCF & ಡೈರೆಕ್ಟರ ಪಾರ್ಕ್ಸ, ಗೋವ
6. ಶ್ರೀ ವಿನಾಯಕ ಪಾಟೀಲ., IPS (2011 batch), SP, ಉತ್ತರ ಕನ್ನಡ
7. ಶ್ರೀ ಗಣಪತಿ ಕೆ. IFS (2012 Batch), DCF, ಕಾರವಾರ ಕರ್ನಾಟಕ
8. ಶ್ರೀ ಚಂದ್ರಶೇಖರ ನಾಯಕ., IAS (2013 batch) CEO ಜಿಲ್ಲಾ ಪಂಚಾಯತ್, ಉತ್ತರ ಕನ್ನಡ
9. ಶ್ರೀ ರಾಜೀವ ಕಿತ್ತೂರು., IRS (2012 Batch), ಕಸ್ಟಮ್ಸ ಮತ್ತುಕೇಂದ್ರ ಎಕ್ಸೈಸ್ ಉಪ ಆಯುಕ್ತರು, ಗೋವ ವಿಮಾನ ನಿಲ್ದಾಣ
10. ಶ್ರೀ ರಾಘವೇಂದ್ರ ರಾಯ್ಕರ., IRS (2014 Batch), ಕಸ್ಟಮ್ಸ ಮತ್ತುಕೇಂದ್ರ ಎಕ್ಸೈಸ್ ಉಪ ಆಯುಕ್ತರು, ಗೋವ ವಿಮಾನ ನಿಲ್ದಾಣ
11. ಶ್ರೀ ಸಂದೇಶ್ ನಾಯಕ್., IAS (2011 batch), ಮಾನ್ಯ ಜಿಲ್ಲಾಧಿಕಾರಿಗಳು, ರಾಜಸ್ತಾನ
12. ಶ್ರೀ ಸೌರಭ್ ನಾಯಕ್., IRS (2011 batch), ಆದಾಯ ತೆರಿಗೆ ಉಪ ನಿರ್ದೇಶಕರು, ಬೆಂಗಳೂರು
13. ಶ್ರೀ ಪ್ರಮೋದ್ ನಾಯಕ್., IRS (2016 batch), ಕಸ್ಟಮ್ಸ ಮತ್ತು ಕೇಂದ್ರ ಎಕ್ಸೈಜ್ ಸಹಾಯಕ ಆಯುಕ್ತರು
ಇವರುಗಳು ಭಾಗವಹಿಸಿ ಕಾರ್ಯಾಗಾರ ಆಯೋಜನೆಯ ಕುರಿತು ಮಾಹಿತಿ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಧ್ಯಾರ್ಥಿಗಳು, ನಾಗರಿಕ ಸೇವಾ ಆಕಾಂಕ್ಷಿಗಳು ಮತ್ತು ಪೋಷಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಲಾಗಿದೆ. ನಾಗರಿಕ ಸೇವಾ ಆಕಾಂಕ್ಷಿಗಳಿಗಾಗಿ/ವಿಧ್ಯಾರ್ಥಿಗಳಿಗಾಗಿ ಮಾರ್ಗದರ್ಶನ, ತರಭೇತಿ ಮತ್ತು ಸಂವಾದ ಕಾರ್ಯಕ್ರಮ ಮತ್ತು ಪೂರ್ವ ಸಿದ್ದತಾ ಸಭೆಯಲ್ಲಿ ಪಾಲ್ಗೊಂಡು ಆಯೋಜನೆಗೆ ನೆರವಾಗಬೇಕಾಗಿ ಕೋರಲಾಗಿದೆ.