ಬೆಂಗಳೂರಿನಲ್ಲಿ ನಾಮಧಾರಿ ವದು-ವರರ ಸಮಾವೇಶ
ಬೆಂಗಳೂರು : ಸತತ ನಾಲ್ಕನೇ ಬಾರಿ " ವದು-ವರ ಸಮಾವೇಶ " ವನ್ನು ನಾಮಧಾರಿ ಕ್ಷೇಮಾಭಿವೃದ್ದಿ ಸಂಘ ಬೆಂಗಳೂರು (ರಿ) ನಲ್ಲಿ matrimony.naamadhaari.com ವೆಬ್-ಸೈಟ್ ಸಹಯೋಗದಲ್ಲಿ ಆಯೋಜಿಸಲಾಗಿರುತ್ತದೆ. 2014 ಇಂದ ಪ್ರತಿವರ್ಷ ಈ ವದು ವರ ಸಮಾವೇಶವನ್ನು ಸಂಘ ಮತ್ತು ವೆಬ್ಸೈಟ್ ಸಹಭಾಗಿತ್ವದಲ್ಲಿ ಆಯೋಜಿಸಲಾಗುತ್ತಿದ್ದು ಸಮಾಜದ ಜನರ ಬೇಡಿಕೆ ಮೇರೆಗೆ ಈ ಬಾರಿಯೂ ಇದನ್ನು ಮುಂದುವರಿಸಿ ಇನ್ನು ಹೆಚ್ಚಿನ ಜನರಿಗೆ ಇದರ ಲಾಭ ದೊರಕಿಸುವ ಉದ್ದೇಶ ಹೊಂದಿದೆ. ಇದಕ್ಕೆ ಸಂಬಂದಿಸಿದಂತೆ ಉಚಿತ ಆನ್ ಲೈನ್ ನೋಂದಣಿ ಕಾರ್ಯವನ್ನು ದಿನಾಂಕ 13-08- 2017 ರಂದು ಬೆಳಿಗ್ಗೆ 11:00 ರಿಂದ ಸಂಜೆ 2:00 ಗಂಟೆಯ ವರೆಗೆ ನಡೆಸಲಾಗುವುದು. ಬೆಂಗಳೂರಿನ ನಾಮಧಾರಿ ಭವನದಲ್ಲಿ (ನಾಗರಭಾವಿ ಬಿ.ಡಿ.ಎ. ಕಾಂಪ್ಲೆಕ್ಸ್ ಹಿಂದೆ) ನಡೆಯಲಿರುವ 39ನೇ ಸರ್ವ ಸದಸ್ಯರ ಸಭೆಯ ಕಾರ್ಯಕ್ರಮಗಳ ಒಂದು ಭಾಗವಾದ ಈ ಸಮಾವೇಶದಲ್ಲಿ ನೊಂದಾಯಿಸಿದವರಿಗೆ matrimony.naamadhaari.com ನಲ್ಲಿ 1 ತಿಂಗಳ ಗೋಲ್ಡ್ ಸದಸ್ಯತ್ವ ಸಂಪೂರ್ಣ ಉಚಿತವಾಗಿ ದೊರಕುತ್ತದೆ.
ವದು - ವರ ಅಥವಾ ಅವರ ಸಂಬಂದಿಕರು ಇಷ್ಟಪಟ್ಟಲ್ಲಿ, ಸಂಜೆ 03:00 ರಿಂದ 04:00 ವರೆಗೆ ವೇದಿಕೆಯ ಮೇಲೆ ಹೋಗಿ ಈ ಕುರಿತು ಮಾತನಾಡಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ. ಹಾಗೆಯೇ ವದು-ವರ ರ ಕಡೆಯವರು ಪರಸ್ಪರ ಬೇಟಿಯಾಗಿ ಮಾತುಕತೆ ನಡೆಸಬಹುದಾಗಿರುತ್ತದೆ. ಆನ್ ಲೈನ್ ನೊಂದಣಿಗಾಗಿ ವದು / ವರರ ಕಲರ್ ಫೊಟೊ, ಇಮೇಲ್ ವಿಳಾಸ, ಮೊಬೈಲ್ ನಂಬರ್ ಅಗತ್ಯವಾಗಿರುತ್ತದೆ. ನೋಂದಣಿಯನ್ನು ಅಗತ್ಯವಾದ ವಿವರದೊಂದಿಗೆ ವದು/ವರರು ಸ್ವತಃ ವಾಗಿ ಅಥವಾ ಅವರ ಪರವಾಗಿ ಅವರ ಕುಟುಂಬದವರು ಭೇಟಿ ನೀಡಿ ಸಭೆಯ ಸ್ಥಳದಲ್ಲಿ ನೋಂದಣಿ ಮಾಡಿಸಬಹುದು.
ಬೆಂಗಳೂರಿನಲ್ಲಿ ನಡೆಯುವ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾದ್ಯವಾಗದಿದ್ದವರು ಇಂಟರನೆಟ್ ಮುಖಾಂತರ ತಮ್ಮ ಊರಿನಿಂದಲೇ ನಾಮಧಾರಿ ವದು-ವರ ಅನ್ವೇಷಣೆಗೆ ಮಿಸಲಾಗಿಟ್ಟ ವೆಬ್ ಸೈಟ್ http://matrimony.naamadhaari.com ನಲ್ಲಿ ಉಚಿತವಾಗಿ ಆನ್ ಲೈನ್ ನೋಂದಣಿಯನ್ನು ಮಾಡಬಹುದಾಗಿದೆ.