ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ
ಬೆಂಗಳೂರು : ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು(ರಿ) ನ 39 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯು ನಾಮಧಾರಿ ಭವನ ನಾಗರಭಾವಿ (ಬಿ.ಡಿ.ಎ. ಕಾಂಪ್ಲೆಕ್ಸ್ ಹಿಂದೆ) 13 -08 -2017 ರಂದು ಭಾನುವಾರ ಬೆಳಿಗ್ಗೆ 11 - 30 ಗಂಟೆಗೆ ಸಂಘದ ಉಪಾಧ್ಯಕ್ಷರಾದ ಶ್ರೀ ರಾಮದಾಸ ಉಪೇಂದ್ರ ನಾಯಕರ ಅದ್ಯಕ್ಷತೆಯಲ್ಲಿ ನಡೆಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಸತ್ಯ ನಾರಾಯಣ ವ್ರತ ದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು ವಾರ್ಷಿಕ ಸರ್ವ ಸದಸ್ಯರ ಸಭೆ ನಂತರ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಪ್ರತಿಭಾ ಪುರಸ್ಕಾರಕ್ಕಾಗಿ ಈಗಾಗಲೇ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿ ಪ್ರಕಟಣೆಯನ್ನು ನ್ಯೂಸ್.ನಾಮಧಾರಿ.ಕಂ ಸೇರಿದಂತೆ ಪ್ರಮುಖ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಕಳೆದ ವರ್ಷ ಸಂಘವು ಒಂದು ಲಕ್ಷ ರೂಪಾಯಿ ಪ್ರತಿಭಾ ಪುರಸ್ಕಾರವನ್ನು ನೀಡಿರುತ್ತಾರೆ.
ಈ ಬಾರಿ ಸಂಘದಲ್ಲಿ ಮಹಿಳಾ ವಿಭಾಗ ಆರಂಭಿಸುವ ಬಗ್ಗೆ ನಿಶ್ಚಯಿಸಲಾಗಿದ್ದು ಸರ್ವಸದಸ್ಯರ ಸಭೆಯಲ್ಲಿ ಅಧಿಕೃತವಾಗಿ ಇದಕ್ಕೆ ಚಾಲನೆ ನೀಡಲಾಗುವುದು. ಮಹಿಳಾ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ಈಗಾಗಲೇ ಆಸಕ್ತ ಮಹಿಳೆಯರ ಅರ್ಜಿ ಅಹ್ವಾನ ಮಾಡಲಾಗಿದೆ. ವದು-ವರರ ಸಮಾವೇಶವನ್ನು matrimony.naamadhaari.com ಸಹಯೋಗದಲ್ಲಿ ಈ ಬಾರಿಯೂ ಆಯೋಜಿಸಲಾಗಿದೆ.