ಪತ್ರಿಕಾ ದಿನಾಚರಣೆ 2017 ಕಾರ್ಯಕ್ರಮಕ್ಕೆ ರಾಮಚಂದ್ರಾಪುರ ಮಠದ ಶ್ರೀಗಳ ಶುಭ ಹಾರೈಕೆ
ಕಾರವಾರ : ಶ್ರೀ ಕಡತೋಕ ಮಂಜು ರವರ ಅದ್ಯಕ್ಷತೆಯಲ್ಲಿ ಇದೇ ಜುಲೈ ೧ ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ಕನ್ನಡ ಜಿಲ್ಲೆ ವತಿಯಿಂದ ಹಮ್ಮಿಕೊಳ್ಳಲಾದ ಪತ್ರಿಕಾ ದಿನಾಚರಣೆ 2017 ಕಾರ್ಯಕ್ರಮಕ್ಕೆ ಗೋಕರ್ಣ ಮಂಡಲಾಧೀಶ ರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರು ಶುಭ ಹಾರೈಸಿದ್ದಾರೆ.
ಈ ಕುರಿತು ಪತ್ರದಲ್ಲಿ ಯೂನಿಯನ್ ನ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿರುವ ಅವರು, ಈ ಯೂನಿಯನ್ ದೇಶದ ಅತ್ಯುತ್ತಮ ಜರ್ನಲಿಸ್ಟ್ ಯೂನಿಯನ್ ಆಗಿ ಬೆಳೆಯಲಿ ಎಂದು ಶುಭ ಹಾರೈಕೆಗಳೊಂದಿಗೆ ಅಧ್ಯಕ್ಷರು ಮತ್ತು ಸದಸ್ಯರಿಗೆ ಪತ್ರ ಕಳುಹಿಸಿಕೊಟ್ಟಿದ್ದಾರೆ. ಅತ್ಯಂತ ಪ್ರಭಾವಿ ಮಠಗಳಲ್ಲೊಂದಾದ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳ ಶುಭ ಹಾರೈಕೆ ಪತ್ರ ತಲುಪುತ್ತಿದ್ದರಿಂದ ಯೂನಿಯನ್ ನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.