logo logo

ಯಮುನಾ ನಾಯ್ಕ್ ಕೊಲೆ ಪ್ರಕರಣ ಪೋಲಿಸರಿಂದಲೇ ಆರೋಪಿಗಳ ರಕ್ಷಣೆ : ಜಯಂತ್ ನಾಯ್ಕ್

ಕಾರವಾರ : 28 ಅಕ್ಟೋಬರ್ 2010 ರಂದು ಮುರ್ಡೇಶ್ವರದ ಯಮುನಾ ನಾಯ್ಕ್ ಕೊಲೆ ಪ್ರಕರಣದ ಅಂತಿಮ ತೀರ್ಪು ನಿನ್ನೆ ಪ್ರಕಟವಾಗಿದ್ದು ಈ ಪ್ರಕರಣದ ಆರೋಪಿ ವೆಂಕಟೇಶ ಹರಿಕಾಂತ ನಿರಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ ಈ ಪ್ರಕಣದ ನಿಜವಾದ ಆರೋಪಿಗಳನ್ನು ಪೋಲಿಸರೇ ರಕ್ಷಣೆ ಮಾಡಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಜಯಂತ್ ನಾಯ್ಕ್ ಆರೋಪಿಸಿದ್ದಾರೆ.

ಇಂದು ಕಾರವಾರದಲ್ಲಿ ಪತ್ರಿಕಾಗೊಷ್ಠಿ ಉದ್ದೇಶಿಸಿ ಮಾತನಾಡಿದ ಅವರು "ಮುರ್ಡೇಶ್ವರದ ಹಿರೇಧೋಮಿಯ ಮಹ್ಮದ್ ಸಾಧಿಕ್ ಎನ್ನುವವರ ಮನೆಯಲ್ಲಿ ಅದೇ ಗ್ರಾಮದ ನಿವಾಸಿ ಯಮುನಾ ನಾಯ್ಕ ಎನ್ನುವ ಯುವತಿಯ ಶವ ಪತ್ತೆಯಾಗಿತ್ತು. ಆದರೇ ಪೋಲಿಸರು ಆ ಮನೆಯ ಮಾಲಿಕರನ್ನು ಸರಿಯಾಗಿ ವಿಚಾರಣೆ ಮಾಡದೆ ವೆಂಕಟೇಶ ಹರಿಕಾಂತ ಅವರನ್ನು ಪ್ರರಣದ ಆರೋಪಿ ಎಂದು ನ್ಯಾಯಾಲಯಕ್ಕೆ ಹಾಜಾರು ಪಡಿಸಿದ್ದುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ" ಎಂದರು.

"ಪ್ರಕರಣ ನಡೆದ ಕಲವೇ ದಿನಗಳಲ್ಲಿ ಶ್ರೀರಾಮ ಸೇನೆಯಿಂದ ಪ್ರತಿಭಟನೆ ನಡೆಸಿ ಈ ಪ್ರಕರಣದ ತನಿಖೆಯನ್ನು ಸಿ.ಓ.ಡಿ ಗೆ ನೀಡಬೇಕು ಎಂದು ಆಗ್ರಹಿಸಿದ್ದೆವು. ಆದರೆ ಸರ್ಕಾರವಾಗಲಿ ಪೋಲಿಸರಾಗಲಿ ನಮ್ಮ ಮನವಿಗೆ ಸ್ಫಂದಿಸಲಿಲ್ಲ"ಎಂದರು.

"ಇಂದು ನ್ಯಾಯಾಲಯ ವೆಂಕಟೇಶ ಹರಿಕಂತ ನಿರಪರಾಧಿ ಎಂದು ತೀರ್ಪು ನೀಡಿದೆ. ಪೋಲಿಸರ ಪೂರ್ವಾಗೃಹ ಪೀಡಿತ ತನಿಖೆಯಿಂದ ಅಮಾಯಕನಿಗೆ ೭ ವರ್ಷ ಶಿಕ್ಷೆಯಾಗಿದೆ. ವೆಂಕಟೇಶ ಹರಿಕಂತ ನಿರಪರಾಧಿಯಾದರೆ ಅಪರಾಧಿ ಯಾರು" ಎಂದು ಪ್ರಶ್ನಿಸಿದರು.

ಈ ಪ್ರಕರಣದ ಹೇಚ್ವಿನ ತನಿಖೆಗಾಗಿ ಉಚ್ಚನ್ಯಾಯಾಲಯದ ಮೇಟ್ಟಿಲೇರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸಂದೀಪ್ ನಾಯ್ಕ್ ಅಣ್ಣಪ್ಪ ನಾಯ್ಕ್ , ಪ್ರಶಾಂತ್ ನಾಯ್ಕ್ , ವೆಂಕಟೇಶ ನಾಯ್ಕ್ ಇದ್ದರು
.
ವರದಿ: ವಿಶ್ವಸನೀಯ ಮೂಲ.

ನಾಮಧಾರಿ ರುಚಿ

MORE RECIPE...

ಬ್ಲಾಗ್