logo logo

ಕರ್ನಾಟಕ ಜರ್ನಲಿಸ್ಟ ಯೂನಿಯನ್ ವತಿಯಿಂದ ಪತ್ರಿಕಾ ದಿನಾಚರಣೆ

ಕಾರವಾರ : ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ರಿ) ಉತ್ತರ ಕನ್ನಡ ಘಟಕವು ಜುಲೈ 1 ಶನಿವಾರ ಮುಂಜಾನೆ 10.30ಕ್ಕೆ ನಗರದ ಪ್ರಿಮಿಯರ್ ಹೊಟೆಲ್ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ-2017 ಸಮಾರಂಭವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ವಿಜಯಲಕ್ಷ್ಮೀ ಶಿಬರೂರು ಅವರಿಗೆ ಕರ್ನಾಟಕ ಪತ್ರಿಕಾರಂಗದ ಪಿತಾಮಹ ಎಂದೇ ಖ್ಯಾತಿ ಪಡೆದ ಹರ್ಮನ್ ಮೋಂಗ್ಲಿಂಗ್ ಅವರ ಹೆಸರಿನಲ್ಲಿನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ನಮ್ಮ ರಾಜ್ಯದಲ್ಲಿಯೇ ಮೊಟ್ಟ ಮೊದಲು ಹರ್ಮನ್ ಮೊಂಗ್ಗಿಂಗ್ ಹೆಸರಿನ ಪ್ರಶಸ್ತಿಯನ್ನು ನಮ್ಮ ಸಂಘಟನೆ ಕಳೆದ ವರ್ಷದಿಂದ ಅರ್ಹ ಪತ್ರಕರ್ತರೋರ್ವರನ್ನು ಆಯ್ಕೆ ಮಾಡಿ ಪ್ರದಾನ ಮಾಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿಗೆ ನಮ್ಮ ನಾಡಿನ ಹೆಮ್ಮೆಯ ಪತ್ರಕರ್ತೆ, ಜನಪರ ನಿಲುವಿನ ದಿಟ್ಟ ಬರಹಗಾರ್ತಿ ವಿಜಯಲಕ್ಷ್ಮಿ ಅವರನ್ನು ಆಯ್ಕೆ ಮಾಡಲಾಗಿದೆ. ಭ್ರಷ್ಟ ವ್ಯವಸ್ಥೆಗೆ ಸಿಂಹಸ್ವಪ್ನವಾದ ವಿಜಯಲಕ್ಷ್ಮೀ ಶಿಬರೂರು ಈಗಾಗಲೇ ರಾಜ್ಯದಲ್ಲಿನ ಹಲವಾರು ಹಗರಣಗಳನ್ನು ಹೊರಗೆಳೆದು ಜನಸಾಮಾನ್ಯರ ಗಮನ ಸೆಳೆದವರು. ಅವರು ಜುಲೈ 1ರಂದು ಮುಂಜಾನೆ 10.30ಕ್ಕೆ ಕಾರವಾರಕ್ಕೆ ಆಗಮಿಸಿ ಗೌರವಪೂರ್ವಕವಾಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಮಾಧ್ಯಮದ ಗೆಳೆಯರು ಬಿಸಿಲು, ಮಳೆ, ಚಳಿ ಎನ್ನದೇ ದಿನದ 24 ಗಂಟೆಯೂ ಎಚ್ಚರದ ಕಣ್ಣಿನಿಂದ ಸಮಾಜದ ಒಳಿತು ಕೆಡಕು ಸುದ್ದಿಗಳನ್ನು ಬೇಟೆಯಾಡಿ ಜನರಿಗೆ ಕೊಡುತ್ತಿರುತ್ತಾರೆ. ಯಾಕೆಂದರೆ ಮಾಧ್ಯಮಕ್ಕೆ ಒಂದು ಬದ್ಧತೆ ಇರುತ್ತದೆ.
ಹೀಗೆ ಹಗಲಿರುಳು ಜನ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು, ಮನವರಿಕೆ ಮಾಡಿಕೊಡಲು ಹೆಣಗುವ ಜೀವಗಳೆಲ್ಲ ಸೇರಿಕೊಂಡು ವರ್ಷಕ್ಕೊಮ್ಮೆ ಪತ್ರಿಕಾ ದಿನಾಚರಣೆ ಆಚರಿಸುತ್ತಿದ್ದೇವೆ. ತಾವೆಲ್ಲ ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಬಂದು ನಮ್ಮೊಟ್ಟಿಗೆ ಕೆಲ ಕ್ಷಣ ಇದ್ದು ಶೋಭೆ ತರಬೇಕೆಂದು ಕೋರುತ್ತಿದ್ದೇವೆ. ಎಲ್ಲರೂ ಬನ್ನಿ, ಆತ್ಮೀಯರೊಂದಿಗೆ ಬನ್ನಿ. ನಿಮ್ಮನ್ನು ಸ್ವಾಗತಿಸಲು ನಾವೆಲ್ಲ ಮಾಧ್ಯಮದ ಗೆಳೆಯರು ಅಂದು ಪ್ರಿಮಿಯರ್ ಹೊಟೆಲ್ ಸಭಾಂಗಣದಲ್ಲಿ ಕಾದಿರುತ್ತೇವೆ ಎಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ನ ಎಲ್ಲ ಸದಸ್ಯರ ಪರವಾಗಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಕಡತೋಕ ಮಂಜು ಮನವಿಮಾಡಿಕೊಂಡಿದ್ದಾರೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್