logo logo

ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ವಿಜಯಲಕ್ಷ್ಮಿ‌ಆಯ್ಕೆ

ಕಾರವಾರ : ಕರ್ನಾಟಕ ಜರ್ನಲಿಸ್ಟ ಯೂನಿಯನ್ ಉತ್ತರ ಕನ್ನಡ ಜಿಲ್ಲಾ ಘಟಕ ಕೊಡಮಾಡುವ ಪ್ರತಿಷ್ಠಿತ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಗೆ ಈಬಾರಿ ಸುವರ್ಣವಾಹಿನಿಯ ತನಿಖಾ ವರದಿ ಪರ್ತಕರ್ತೆ ವಿಜಯಲಕ್ಷ್ಮಿ ಶಿಬರೂರ ಆಯ್ಕೆ ಯಾಗಿದ್ದಾರೆ.
ದೀಪಕ್ ಶೆಣ್ವಿ , ನಾಗರಾಜ್ ಹರಪನಹಳ್ಳಿ, ಅನು ಕಳಸ ಅವರನ್ನೊಳಗೊಂಡ ತ್ರಿಸದಸ್ಯ ತೀರ್ಪುಗಾರರ ಸಮಿತಿ ಈ ಪ್ರತಿಷ್ಠಿತ ಪ್ರಶಸ್ತಿಗೆ ವಿಜಯಲಕ್ಷ್ಮಿ ಶಿಬರೂರ ರನ್ನು ಆಯ್ಕೆ ಮಾಡಿ ತೀರ್ಮಾನ ಪ್ರಕಟಿಸಿದ್ದಾರೆ.
ಕನ್ನಡ ಪತ್ರಿಕೋದ್ಯಮದ ಹರಿಕಾರ ಹರ್ಮನ್ ಮೊಗ್ಲಿಂಗ್ ರವರ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಕಳೆದ ವರ್ಷದಿಂದ ಪತ್ರಿಕೋದ್ಯಮದಲ್ಲಿ ಸಾಧನೆಗೈದವರಿಗೆ ನೀಡಲಾಗುತ್ತಲಿದೆ. ಕಳೆದ ವರ್ಷ ಈ ಪ್ರಶಸ್ತಿಯನ್ನು ಜೊಯಿಡಾದ ಪಾಂಡುರಂಗ ಪಟಗಾರ ಪಡೆದಿದ್ದರು.
ಜುಲೈ ೧ ರಂದು ಕಾರವಾರದಲ್ಲಿ ನಡೆವ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಜರ್ನಲಿಸ್ಟ ಯೂನಿಯನ್ ಜಿಲ್ಲಾಧ್ಯಕ್ಷ ಕಡತೋಕ ಮಂಜು ಹೇಳಿದ್ದಾರೆ. ಈ ಬಾರಿ ಪತ್ರಿಕೋದ್ಯಮದ ಒಬ್ಬ ಧೀರ ಮಹಿಳೆಯಾಗಿ ಅಪಾಯಗನ್ನೆದುರಿಸಿ ಕವರ ಸ್ಟೋರಿ ಗಳನ್ನೂ ವರದಿಮಾಡಿ ಪತ್ರಿಕೋದ್ಯಮದಲ್ಲಿ ತಮ್ಮದೇ ಛಾಪು ಮೂಡಿಸಿದ ವಿಜಯಲಕ್ಷಿಯವರು ಆಯ್ಕೆಯಾಗಿರುವುದು ಸಂತಸದ ವಿಷಯ ಎಂದು ಅವರು ತಿಳಿಸಿದರು.
ಪ್ರಶಸ್ತಿ ಐದು ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಫಲಕ ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್