logo logo

ಹೊನ್ನಾವರದಲ್ಲಿ ನಾಮಧಾರಿ ವಿದ್ಯಾರ್ಥಿ ನಿಲಯಕ್ಕೆ ಶಂಕುಸ್ಥಾಪನೆ

ಹೊನ್ನಾವರ : ಹೊನ್ನಾವರದ ಶರಾವತಿ ಸರ್ಕಲ್ ಬಳಿ ನಾಮಧಾರಿ ವಿದ್ಯಾರ್ಥಿನಿಲಯದ ಬಹುಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಶನಿವಾರ ಏಪ್ರಿಲ್ 29 ರಂದು ಶಂಕುಸ್ಥಾಪನೆ ನೆರವೇರಿತು. ರಾಷ್ಟ್ರಿಯ ಹೆದ್ದಾರಿ 66 ಕ್ಕೆ ಹೊಂದಿಕೊಂಡಿರುವ 12 ಗುಂಟೆ ಜಾಗದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ. ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಬೆಳಿಗ್ಗೆ 10 ಗಂಟೆಗೆ ಆರಂಭವಾದ ಸಮಾರಂಭ ಯಶಸ್ವಿಯಾಗಿ ನೆರವೇರಿತು. ನಾಮಧಾರಿ ಸಂಘದ ಅಧ್ಯಕ್ಷರಾದ ಮಾಜಿ ಸಚಿವ ಶ್ರೀ ಆರ್.ಏನ್.ನಾಯ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಶಾಸಕರಾದ ಶ್ರೀ ಜೆ.ಡಿ.ನಾಯ್ಕ, ಬೆಂಗಳೂರಿನ ಮಾಜಿ ಡಿ.ಸಿ.ಪಿ. ಶ್ರೀ ಎಂ.ಟಿ.ನಾಯ್ಕ ಮತ್ತು ಸಮಾಜದ ಇನ್ನಿತರ ಪ್ರಮುಖ ಗಣ್ಯರು, ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಸದಸ್ಯರು ಉಪಸ್ಥಿತರಿದ್ದರು.
ಮೂರೂ ಅಂತಸ್ತಿನ ಈ ಕಟ್ಟಡ ನಗರದ ಹೃದಯ ಭಾಗದಲ್ಲಿ ನಿರ್ಮಾಣವಾಗಲಿದ್ದು ರಾಜ್ಯಸಾರಿಗೆ ಬಸ್ಸುಗಳಿಂದ ಹಿಡಿದು ಬಹುತೇಕ ಎಲ್ಲ ವಾಹನ ನಿಲುಗಡೆ ಈ ಸ್ಥಳದ ಸಮೀಪದಲ್ಲೇ ಇರುವುದರಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಸಮಾಜದ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗಲಿದೆ. ಇದಲ್ಲದೆ ಸಂಘ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ವ್ಯವಸ್ಥತೆಗಳನ್ನೊದಗಿಸುವ ಉದ್ದೇಶಹೊಂದಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್