ಕುಮಟಾದಲ್ಲಿ ಶ್ರೀ ವೆಂಕಟ್ರಮಣ ದೇವರ ವರ್ಧಂತಿ ಉತ್ಸವ
ಕುಮಟಾ : ಕುಮಟಾ ತಾಲೂಕಾ ಆರ್ಯ ಈಡಿಗ ನಾಮಧಾರಿ ಸಂಘದ ವತಿಯಿಂದ ಮೇ 01 ರಂದು ಸೋಮವಾರ ಶ್ರೀ ವೆಂಕಟ್ರಮಣ ದೇವರ ವರ್ಧಂತಿ ಉತ್ಸವವನ್ನು ನಗರದ ಬಗ್ಗೋಣ ರಸ್ತೆಯಲ್ಲಿರುವ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಪ್ರಯುಕ್ತ ಬೆಳಿಗ್ಗೆ 09.30 ಗಂಟೆಗೆ ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಮಾಡಿ, ಗಣಪತಿ ಪೂಜೆ, ಹೋಮ ಇನ್ನಿತ್ಯಾದಿ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು.
ಇದೇ ಸಂದರ್ಭದಲ್ಲಿ ಸಮುಧಾಯದ ಗುರುಗಳಾದ ಬ್ರಹ್ಮಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆ ಮಾಡಲಾಗುವುದು ಮತ್ತು ಮಂತ್ರಾಕ್ಷತೆಯನ್ನು ವಿತರಿಸಲಾಗುವುದು. ಮಧ್ಯಾಹ್ನ ಅನ್ನಸಂತರ್ಪಣೆ ನಂತರ ಸಾಯಂಕಾಲ ಕಲ್ಯಾಣೋತ್ಸವ ಮತ್ತು ಶೋಭಾಯಾತ್ರೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆಯೆಂದು ನಾಮಧಾರಿ ಸಂಘದ ಶ್ರೀ ಎಂ.ಎಂ.ನಾಯ್ಕರವರು ತಿಳಿಸಿದ್ದಾರೆ.