ಉತ್ತರ ಕನ್ನಡ ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಏಪ್ರಿಲ್ ೨೯ ಮತ್ತು ೩೦ ರಂದು
ಕಾರವಾರ : ಉತ್ತರ ಕನ್ನಡ ಜಿಲ್ಲಾ ೨೦ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲೆಯ ಹಳಿಯಾಳ ತಾಲ್ಲೂಕಿನ ತೇರಗಾಂವದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಪ್ರಿಲ್ ೨೯ ಮತ್ತು ೩೦ ರಂದು ( ಶನಿವಾರ ಮತ್ತು ಭಾನುವಾರ) ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಲಾಗಿದೆ.
ಉತ್ತರ ಕನ್ನಡ ಕ.ಸಾ.ಪ. ಜಿಲ್ಲಾಧ್ಯಕ್ಷರಾದ ನಮ್ಮ ಸಮುದಾಯದ ಶ್ರೀ ಅರವಿಂದ ಕರ್ಕಿಕೋಡಿ, ಹೊನ್ನಾವರ ರವರ ಅಧ್ಯಕ್ಷತೆಯಲ್ಲಿ ನಡೆಯುವ ಎರಡು ದಿನದ ಈ ಸಮಾರಂಭದಲ್ಲಿ ಜಿಲ್ಲೆಯ ಸಂಸದರು, ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು, ತಾಲ್ಲೂಕ ಪಂಚಾಯತ ಅಧ್ಯಕ್ಷರು ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮ್ಮೇಳನದ ಅಂಗವಾದ ಗೋಷ್ಠಿ ಮತ್ತು ಸಂವಾದದಲ್ಲಿ "ಉತ್ತರ ಕನ್ನಡದ ಕಥನ ಸಾಹಿತ್ಯ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಮತ್ತು ಬದುಕಿನೊಂದಿಗೆ ಕೆಲಹೊತ್ತು, ಕಾವ್ಯ ಕೋಗಿಲೆ, ಬುಡಕಟ್ಟು ನೆಲಗಟ್ಟು, ಕದಂಬರ ನಾಡಿನಲ್ಲಿ ಕನ್ನಡದ ತಾಯಿಬೇರು, ಕಾವ್ಯ ಕಲರವ ಮತ್ತು ಐ.ಸಿ.ಯು. ನಲ್ಲಿ ಕನ್ನಡ ಶಾಲೆಗಳು" ಸೇರಿವೆ.
ಸನ್ಮಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಸನ್ಮಾಸಿಲ್ಪಡುವವರ ಪಟ್ಟಿಯಲ್ಲಿ ಜಿಲ್ಲಾ ಕ.ಸಾ.ಪ. ದ ಗೌ.ಕೋಶಾಧ್ಯಕ್ಷರಾದ ನಮ್ಮ ಸಮುದಾಯದ ಶ್ರೀ ಉಮೇಶ ಮುಂಡಳ್ಳಿ, ಭಟ್ಕಳ ರವರು ಇರುವುದು ಸಂತಸದ ವಿಷಯವಾಗಿದೆ.
| ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ |