logo logo

ಮೇ 03 ರಿಂದ 07 ರವರೆಗೆ ಅಂಕೋಲಾ ಸಾಂಸ್ಕ್ರತಿಕ ಸಂಭ್ರಮ 2017

ಅಂಕೋಲ : ಕೆನರಾ ವಾರ್ತೆ, ಶ್ರೀ ವೆಂಕಟರಮಣ ಯುವಕ ಸಂಘ ಮತ್ತು ಗೆಳೆಯರ ಬಳಗ, ಅಂಕೋಲಾ ವತಿಯಿಂದ ಅಂಕೋಲದ ಜೈಹಿಂದ ಶಾಲಾ ಮೈದಾನದಲ್ಲಿ ಮೇ 03 ರಿಂದ 07 ರವರೆಗೆ ಐದು ದಿನಗಳ ಕಾಲ "ಅಂಕೋಲಾ ಸಾಂಸ್ಕ್ರತಿಕ ಸಂಭ್ರಮ" ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರಾದ ಕೆನರಾ ವಾರ್ತೆಯ ಶ್ರೀ ಮಂಜುನಾಥ ಆರ್. ನಾಯ್ಕ ತಿಳಿಸಿದರು.
ಈ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಂಘಟನಾ ಸಮಿತಿಯೊಂದನ್ನು ರಚಿಸಿ ಭಾರದ ಸಿದ್ದತೆಯನ್ನು ಆರಂಭಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳ ಅನಾವರಣಕ್ಕೂ ಬಳಸಲಾಗುತ್ತದೆ. ಪ್ರಥಮ ಭಾರಿಗೆ ಅಂಕೋಲದಲ್ಲಿ ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದ ಕಲಾವಿದರ ಕಲೆಗಳ ಸಮ್ಮಿಲನವಾಗಲಿದೆ. ಹಾಸ್ಯ. ಜಾನಪದ ನೃತ್ಯಗಳು, ಆದರ್ಶ ದಂಪತಿ, ಪುಟಾಣಿಗಳಿಗಾಗಿ ಮಿಸ್ ಅಂಕೋಲಾ ಸ್ಪರ್ಧೆ, ರಸಮಂಜರಿ, ಯಕ್ಷಗಾನ ಇವೆಲ್ಲ ಸಾಂಸ್ಕ್ರತಿಕ ಸಂಭ್ರಮದ ಅಂಗವಾಗಲಿದೆ ಎಂದು ಸಂಘಟಕರು ತಿಳಿಸಿದರು.

ನಾಮಧಾರಿ ರುಚಿ

MORE RECIPE...

ಬ್ಲಾಗ್