logo logo

ಅಪಘಾತಕ್ಕೀಡಾದ ಗೋವನ್ನು ರಕ್ಷಿಸಿದ ಯುವಕರ ತಂಡ

ಯಲ್ಲಾಪುರ : ಯಲ್ಲಾಪುರ ಪಟ್ಟಣದ ರಾಷ್ಟ್ರಿಯ ಹೆದ್ದಾರಿಯ ಶಾನಭಾಗ ಹೋಟೆಲ ಹತ್ತಿರದಲ್ಲಿ ರಾತ್ರಿಯ ವೇಳೆ ವಾಹನವೊಂದು ಹಸುವಿಗೆ ಡಿಕ್ಕಿ ಹೊಡೆದು ಹೋಗಿದೆ. ಅಪಘಾತದಿಂದ ಘಾಸಿಯಾಗಿ ರಸ್ತೆ ಪಕ್ಕದಲ್ಲಿ ರಕ್ತಸ್ರಾವದಿಂದ ನರಳುತ್ತಿದ ಗೋ ಮಾತೆಯನ್ನು ಯಲ್ಲಾಪುರದ ಹಿಂದೂ ಯುವಮುಖಂಡ ಶ್ರೀ ಸೋಮೇಶ್ವರ ನಾಯ್ಕ ಹಾಗೂ ಉದಯ ಹಾಗೂ ಶಿವಕುಮಾರ್,ಕಿರಣ ಹಾಗೂ ಜಗದೀಶ್ ನಾಯ್ಕ ಹಾಗೂ ಸೋಮು ನಾಯ್ಕ ಗೆಳೆಯರ ಬಳಗದವರು ಹಾಗೂ ಯಲ್ಲಾಪುರದ ಗೋ ಪರಿವಾರದ ಕಾರ್ಯಕರ್ತರು ಯಲ್ಲಾಪುರದ ಪಶು ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಸರಿಯಾದ ಚಿಕಿತ್ಸೆಯನ್ನು ನೀಡಿಸಿದರು. ನೋವಿನಿಂದ ನರಳುತ್ತಿದ್ದ ಗೋವಿನ ಆರೈಕೆ ಮಾಡುವ ಮೂಲಕವಾಗಿ ಪ್ರಾಣಿ ದಯೆಯನ್ನು ಮೆರೆದಿದ್ದಾರೆ.
ರಾತ್ರಿಯವೇಳೆ ಹೆದ್ದಾರಿಯಲ್ಲಿ ಚಲಿಸುವ ವಾಹನಗಳು ಈ ರೀತಿ ಅಪಘಾತವನ್ನು ಮಾಡುವುದು ಅತಿ ಸಾಮಾನ್ಯವಾಗಿದ್ದು, ಈ ಗೋವಿಗೆ ಅಪಘಾತ ಮಾಡಿದ ವಾಹನದ ಸುಳಿವು ಇನ್ನೂ ದೊರೆತಿಲ್ಲ.

ನಾಮಧಾರಿ ರುಚಿ

MORE RECIPE...

ಬ್ಲಾಗ್