ನಾಮಧಾರಿ ಗೌರಕ್ಕನ ಸಾಹಸಗಾಥೆ
ಸಿರ್ಸಿ : ಶಿರಸಿ ಪಟ್ಟಣದ ಗಣೇಶನಗರ ನಿವಾಸಿ 51ರ ಹರೆಯದ ದಿಟ್ಟ ಮಹಿಳೆ ಶ್ರೀಮತಿ ಗೌರಿ ಚಂದ್ರಶೇಖರ ನಾಯ್ಕ 60 ಅಡಿಯ ಬಾವಿಯನ್ನು ಏಕಾಂಗಿಯಾಗಿ ತೋಡಿ ನಾಮಧಾರಿಗಳು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದೆಂದು ತೋರಿಸಿದ್ದಾರೆ. ಯಾವುದೇ ಅನುಭವವಿಲ್ಲದೆ ಏಕಾಂಗಿಯಾಗಿ ಬಾವಿ ತೊಡುವುದೆಂದರೆ ಅದು ಅಷ್ಟು ಸುಲಭದ ಮಾತಲ್ಲ ಮತ್ತು ತುಂಬಾ ಅಪಾಯದಿಂದ ಕುಡಿದ ಕಾರ್ಯ. 60 ಅಡಿಯನ್ನು ಹತ್ತಿ ಇಳಿಯುವಾಗ ಒಮ್ಮೆಯಾದರೂ ಕೈ ತಪ್ಪಿದರೂ ಅಪಾಯ ನಿಷ್ಚಿತ, ಬಾವಿ ತೋಡುವಾಗ ಭೂಕುಸಿತವಾಗಬಹುದು, ಆಳದಲ್ಲಿ ಉಸಿರಾಟಕ್ಕೆ ತೊಂದರೆ ಕೂಡ ಆಗಬಹುದು. ಇಂತ ಕಠಿಣ ಪರಿಸ್ಥಿಯಲ್ಲೂ ಈ ದಿಟ್ಟ ಮಹಿಳೆ ಯಾರಿಗೂ ತಿಳಿಸದೇ ದಿನಕ್ಕೆ ಹಲವಾರು ಸಾರಿ ಈ ಬಾವಿಯಲ್ಲಿ ಹತ್ತಿಳಿದಿದ್ದಾರೆ.
4 ಅಡಿ ಅಗಲದ ಈ ಬಾವಿಯನ್ನು ಕೊನೆಯ ನಾಲ್ಕು ದಿನದ ಹೊರತಾಗಿ ಯಾರ ಸಹಾಯವನ್ನೂ ಪಡೆಯದೇ ತಾವೊಬ್ಬರೇ ಬಾವಿ ತೋಡಿ ಮುಗಿಸಿದ್ದಾರೆ. ಮಗ ಕೋಪಗೊಳ್ಳುವ ಎಂದು ಯಾರಿಗೂ ತಿಳಿಸದೇ ಬಾವಿ ತೋಡುವ ಕಾರ್ಯ ಪೂರ್ಣಗೊಳಿಸಿ ಮಗನಿಗಷ್ಟೇ ಅಲ್ಲ ಎಲ್ಲರೂ ಹುಬ್ಬೇರುಸುವಂತೆ ಮಾಡಿದ್ದಾರೆ.
ಕಳೆದವರ್ಷ ಅತಿ ಕಡಿಮೆ ಮಳೆಯಾಗಿದ್ದರಿಂದ ರಾಜ್ಯದೆಲ್ಲೆಡೆ ನೀರಿಗೆ ಕಷ್ಟಪಡುವ ಸ್ಥಿತಿ ನಿರ್ಮಾಣವಾಗಿದೆ, ಇದೇರೀತಿ ಅಂತರ್ಜಲ ಕುಸಿದು ನೀರಿನ ಕೊರತೆಯಿಂದ ತಾವು ಬೆಳೆಸಿದ ಅಡಿಕೆ, ತೆಂಗು, ಬಾಳೆ ಮತ್ತಿತರ ಸಸಿಗಳು ಒಣಗುತ್ತಿರುವುದನ್ನು ನೋಡಲಾಗದೆ ತಾವೇ ಈ ಸಾಹಸಕ್ಕೆ ಕೈ ಹಾಕಿ ಸದ್ಯಕ್ಕೆ ಕರಾವಳಿಯಲ್ಲಿ ಜನಪ್ರಿಯತೆಗಳಿಸಿದ್ದಾರೆ. ಯಾವುದೇ ಕ್ರೀಡೆ, ಪ್ರಶಸ್ತಿಗೆ ಆಸೆ ಪಡದೆ ಜೀವನ ನಡೆಸಲು ಈ ರೈತ ಮಹಿಳೆಯ ಸಾಹಸಗಾಥೆಗೆ ಎಷ್ಟು ಪ್ರಶಸ್ತಿ ಸಿಕ್ಕರೂ ಕಡಿಮೆ.