logo logo

ನಾಮಧಾರಿ ಸಮಾಜದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ದತಾ ಕಾರ್ಯಾಗಾರ

ಕುಮಟಾ : ದಿನಾಂಕ 18, 19 ಮಾರ್ಚ 2017 ರಂದು ಎರಡು ದಿನಗಳ ಕಾಲದ ನಾಮಧಾರಿ ಸಮಾಜದ SSLC ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವಸಿದ್ದತಾ ಕಾರ್ಯಾಗಾರವನ್ನು ಕುಮಟಾದ ನಾಮಧಾರಿ ಸಭಾಭವನದಲ್ಲಿ ಕುಮಟಾ ನಾಮಧಾರಿ ನೌಕರರ ಸಂಘ (ರಿ) ಇವರ ಆಶ್ರಯದಲ್ಲಿ ಜರುಗಿಸಲಾಗಿತು. ತಾಲೂಕಾ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷರಾದ ಶ್ರೀ ಜೈವಂತ ನಾರಿಂಗ ನಾಯ್ಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ನಾಮಧಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ಏನ್. ಆರ್. ನಾಯ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಾಯೋಜಕರಾದ ಶ್ರೀ ಎಚ್.ಏನ್.ನಾಯ್ಕ, ಶ್ರೀ ರತ್ನಾಕರ ನಾಯ್ಕ, ಶ್ರೀ ಎಚ್.ಆರ್.ನಾಯ್ಕ ಮತ್ತು ಶ್ರೀ ಉದಯ ನಾಯ್ಕರವರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಸಮಾಜದ 190 ವಿದ್ಯಾರ್ಥಿಗಳು ಹಾಜರಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಊಟ-ಉಪಚಾರ ಹಾಗೂ ಲೇಖನ ಸಾಮಗ್ರಿಗಳ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿತ್ತು. ಶಿಕ್ಷಕರಾದ ಶ್ರೀ ಡಿ.ಜಿ.ನಾಯ್ಕ ಪ್ರಾರ್ಥಿಸಿದರು ಶ್ರೀ ಕಿರಣ ನಾಯ್ಕ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು ಹಾಗೂ ಶ್ರೀ ಮುಕುಂದ ನಾಯ್ಕ ವಂದಿಸಿದರು.
ಶಿಕ್ಷಕರಾದ ಶ್ರೀ ಎಂ.ಎಂ. ನಾಯ್ಕ ನಿರೂಪಿಸಿದರು, ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ರಾಜೇಶ್ ನಾಯ್ಕ, ಶ್ರೀಮತಿ ಜಯಶ್ರೀ ನಾಯ್ಕ, ಶ್ರೀ ಆರ್. ಎಂ. ನಾಯ್ಕ, ಶ್ರೀ ಆರ್.ಡಿ.ನಾಯ್ಕ, ಶ್ರೀ ಉದಯ ನಾಯ್ಕ, ಶ್ರೀ ಪಿ.ಡಿ.ನಾಯ್ಕ ಹಾಗೂ ಶ್ರೀ ವಿವೇಕ್ ಆಚಾರಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸದಸ್ಯರಾದ ಶ್ರೀ ಉದಯ ನಾಯ್ಕ, ಶ್ರೀ ನಿತ್ಯಾನಂದ ನಾಯ್ಕ, ಶ್ರೀ ಮುಕುಂದ ನಾಯ್ಕ, ಶ್ರೀ ಆರ್.ಡಿ. ನಾಯ್ಕ, ಶ್ರೀ ವಿವೇಕ ನಾಯ್ಕ, ಶ್ರೀ ಉಲ್ಲಾಸ ನಾಯ್ಕ, ಶ್ರೀ ಎಸ್. ಡಿ. ನಾಯ್ಕ, ಶ್ರೀ ಸತ್ಯ ನಾಯ್ಕ, ಶ್ರೀ ಉಮೇಶ ನಾಯ್ಕ, ಶ್ರೀ ಜಿ.ಆರ್.ನಾಯ್ಕ, ಶ್ರೀ ಎಂ.ಎ.ನಾಯ್ಕ, ಶ್ರೀ ಪಿ.ಆರ್.ನಾಯ್ಕ ಮತ್ತಿತರರು ಸಹಕರಿಸಿದ್ದರು.

ನಾಮಧಾರಿ ರುಚಿ

MORE RECIPE...

ಬ್ಲಾಗ್