ಸಮಾಜದ ಅಭಿವೃದ್ಧಿಗಾಗಿ ಪ್ರಾರಂಭವಾಗುತ್ತಿರುವ ಶ್ರೀ ಗುರು ಸಹಕಾರಿ ನಿಯಮಿತ ಸಂಘ
ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನಾಮಧಾರಿ ಸಮಾಜ ಬಡ ವಿದ್ಯಾರ್ಥಿಗಳ ಹಾಗೂ ಸಣ್ಣ ವ್ಯಾಪಾರಿಗಳ ಸ್ವಾವಲಂಬೆನೆಗಾಗಿ ಯಲ್ಲಾಪುರದ ಸಮಗ್ರ ನಾಮಧಾರಿ ಅಭಿವೃದ್ಧಿ ಸಂಘ(ರಿ) ದ ಮುಂದಾಳತ್ವದಲ್ಲಿ ಶ್ರೀ ಗುರು ಸಹಕಾರಿ ನಿಯಮಿತ ಸಂಘ ಎಂಬ ನಮ್ಮ ಸಮಾಜದ ತಾಲೂಕಿನಲ್ಲೆ ಪ್ರಥಮವಾದ ಜಿಲ್ಲಾ ಮಟ್ಟದ ಸಹಕಾರಿ ಸಂಘ ಸ್ಥಾಪನೆಯಾಗುತ್ತಿದೆ. ಯಲ್ಲಾಪುರ ನಾಮಧಾರಿ ಸಂಘದ ಅಧ್ಯಕ್ಷರಾದ ಶ್ರೀ ಆರ್. ಐ. ನಾಯ್ಕರ ಮುಂದಾಳುತ್ವದಲ್ಲಿ ಸದ್ಯಕ್ಕೆ ಷೇರುಗಳನ್ನು ಹಂಚಲಾಗುತ್ತಿದ್ದು ಅತಿ ಶೀಘ್ರದಲ್ಲಿ ಸಹಕಾರಿ ಸಂಘದ ಉದ್ಘಾಟನೆಯ ದಿನಾಂಕ ನಿಗದಿಯಾಗಲಿದೆ.
ನ್ಯೂಸ್.ನಾಮಧಾರಿ.ಕಂ ಗೆ ಸುದ್ದಿಯನ್ನು ತಿಳಿಸಿದ ಶ್ರೀ ಮನೋಜ್ ನಾಯ್ಕರವರು ಈ ಸಂಘವನ್ನು ಉತ್ತರ ಕನ್ನಡದಾದ್ಯಂತ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.