ನಾಮಧಾರಿ ಸಮಾಜದ ಮ್ಯಾಟ್ರಿಮೋನಿಯ ಮೊಬೈಲ್ ಆಪ್ ಬಿಡುಗಡೆ
ಬೆಂಗಳೂರು : ನಾಮಧಾರಿ ವಧುವರಾನ್ವೇಷಣೆಗೆಂದೇ ತಯಾರಿಸಿದ ಪ್ರಪ್ರಥಮ ಮೊಬೈಲ್ ಆಪ್ ಅನ್ನು ಬೆಂಗಳೂರಿನಲ್ಲಿ ಅನಾವರಣ ಮಾಡಲಾಯಿತು. ಸಾಹಿತಿ ಮತ್ತು ಹಿಂದುಳಿದ ಅಲ್ಪಸಂಖ್ಯಾತರ ಇಲಾಖೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀ ಕೇಶವ ಡಿ. ನಾಯ್ಕರವರು ಸಮಾರಂಭದ ಉದ್ಘಾಟನೆ ಮಾಡಿ ಮಾತನಾಡಿದರು, Matrimony.naamadhaari.com ನ್ನು2013ರಲ್ಲಿ ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಸರ್ವ-ಸದಸ್ಯರ ಸಭೆಯಲ್ಲಿ ಲೋಕಾರ್ಪಣೆ ಮಾಡಿದನಂತರ ಹೆಚ್ಚಿನ ಸಂಖ್ಯೆಯಲ್ಲಿ ಸಮುಧಾಯದವರು ಇದರ ಲಾಭ ಪಡೆದಿರುತ್ತಾರೆ. ಈಗ ಮುಂದುವರೆದು ಮೊಬೈಲ್ ಆಪ್ ನ್ನು ಸಿದ್ಧಪಡಿಸಿದ್ದರಿಂದ ಈ ಸೌಲಭ್ಯ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಲಿದೆ ಎಂದು ತಿಳಿಸಿದರು.
ಈ ಮೊಬೈಲ್ ಆಪ್ ನಾಮಧಾರಿ ಸಮಾಜಕ್ಕೆ ಅತಿದೊಡ್ಡ ಕೊಡುಗೆ ಆಗಲಿದ್ದು, ನಾಮಧಾರಿ ಸಮುದಾಯಕ್ಕೆ ಸಂಬಂದಿಸಿದ ಪ್ರಪ್ರಥಮ ಮೊಬೈಲ್ ಆಪ್ ಇದಾಗಿದೆ. ಈ ಮೊಬೈಲ್ ಆಪ್ ನ್ನು ಸದ್ಯಕ್ಕೆ ಗೂಗಲ್ ಪ್ಲೇ ಸ್ಟೋರ್ ಇಂದ ಸುಲಭವಾಗಿ ಮತ್ತು ಉಚಿತವಾಗಿ ಡೌನ್ಲೋಡ್ ಮಾಡಿ ಇನ್ಸ್ಟಾಲ್ಲ್ಯಾ ಮಾಡಬಹುದಾಗಿದೆ. ಅತಿಶೀಘ್ರದಲ್ಲಿ ಆಪಲ್ ಸ್ಟೋರ್ ನಲ್ಲೂ ಬಿಡುಗಡೆ ಮಾಡಲಾಗುವುದೆಂದು ಮುಖ್ಯ ತಂತ್ರಜ್ಞೆ ಶ್ರೀಮತಿ ವಿನುತಾ ತಿಳಿಸಿದರು.