ನಾಮಧಾರಿ ನ್ಯೂಸ್ ಶುಭಾರಂಭ
ಬೆಂಗಳೂರು : ನಾಮಧಾರಿ ಸಮುಧಾಯದ ಪ್ರತ್ಯೇಕ ನ್ಯೂಸ್ ವೆಬ್ಸೈಟ್ ನ್ನು ನಾಮಧಾರಿ.ಕಾಮ್ ಪ್ರಸ್ತುತಪಡಿಸುತ್ತಿದೆ. ನಾಮಧಾರಿ ಸಮಾಜದ ಜನರ ಬಗ್ಗೆ ಸುದ್ದಿ ಪ್ರಕಟಿಸುವಾಗ ಅನೇಕ ಮಾಧ್ಯಮಗಳು ತಾರತಮ್ಯ ತೋರುವುದನ್ನು ನಮ್ಮಲ್ಲಿ ಅನೇಕರು ಅನುಭವಿಸಿರುತ್ತಾರೆ ಹಾಗೆ ಅನುಭವ ಹಂಚಿಕೊಂಡಿರುತ್ತಾರೆ. ನಾಮಧಾರಿ ಸಮಾಜದ ಪ್ರತಿಷ್ಠೆಯನ್ನು ಹೆಚ್ಚಿಸುವ ಅದೆಷ್ಟೋ ಸಾಧಕರ ಸಾಧನೆಯ ಸುದ್ದಿಯನ್ನು ಪ್ರಕಟಿಸುವಾಗ ಕೆಲವರು ಅನೇಕಬಾರಿ ತಿಳಿದೋ/ತಿಳಿಯದೆಯೋ ಸರಿಯಾಗಿ ಪ್ರಕಟಿಸದೇ ಅಥವಾ ತಿರುಚಿ ಬರೆದು ಅಥವಾ ಮರೆಮಾಚುವುದರಲ್ಲಿ ಇಲ್ಲಿಯವರೆಗೂ ಯಶಸ್ಸಾಗಿದ್ದಾರೆ.
ಹೀಗಾಗಿ ನಾಮಧಾರಿ ಸಮಾಜದವರ ಅನೇಕ ಪ್ರಮುಖ ಸುದ್ದಿ ಹಾಗೂ ಸಾಧಕರ ಸಾದನೆಗಳು "ಎಲೆ ಮರೆಯ ಕಾಯಿ" ಆಗಿ ಉಳಿದುಬಿಟ್ಟಿರುತ್ತದೆ. ಇಲ್ಲಿಯವರೆಗೆ ಇದ್ದ ಈ ಮಾಧ್ಯಮದ ಸಮಸ್ಯೆಯನ್ನು ಹೋಗಲಾಡಿಸಲು ಹಾಗೆ ಸಮಾಜದ ಮತ್ತು ಮಾಧ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡಲು ನಮ್ಮ news.naamadaari.com ಮಹತ್ವದ ಕಾರ್ಯ ನಿರ್ವಹಿಸಲಿದೆ.
ನ್ಯೂಸ್.ನಾಮಧಾರಿ ನಾಮಧಾರಿಗಳ ಸುದ್ದಿ ಪ್ರಸಾರಕ್ಕೆಂದೇ ಉದಯಿಸಿದ ವೆಬ್ಸೈಟ್ ಆಗಿದೆ. ಅದಲ್ಲದೆ ಕಷ್ಟದಲ್ಲಿರುವ ನಾಮಧಾರಿ ಜನರಿಗೆ ಸಹಾಯ ಸೇತುವೆಯಾಗಿ ಸಹಾಯ ಹಸ್ತ ನೀಡಲಿಚ್ಛಿಸುವವನ್ನು ಸಂಪರ್ಕಕಲ್ಪಿಸುವ ಉದ್ದೇಶಹೊಂದಿದೆ.
ಇದರಲ್ಲಿ ಪ್ರಮುಖವಾಗಿ 3 ಅಂಕಣವಿದೆ.
1. ನ್ಯೂಸ್: ಯಾವುದೇ ನಾಮಧಾರಿ ಜನರ / ಸಂಘ / ಸಂಸ್ಥೆಗಳ ಆಗುಹೋಗುಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು, ವಿದ್ಯಾರ್ಥಿಗಳು ಉನ್ನತ ಅಂಕ ಪಡೆದಲ್ಲಿ, ಅಧಿಕಾರಿಗಳು ಬಡ್ತಿ ಪಡೆದಲ್ಲಿ, ನಾಮಧಾರಿ ಸಂಘದ ಪ್ರಕಟಣೆಯನ್ನು ಇಲ್ಲಿ ಕಳಿಸಬಹುದು.
2. ಸಾಧಕರು: ಯಾವುದೇ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವ ಹಾಗೂ ಸಾಧನೆಗೈದಿರುವ ನಾಮಧಾರಿಗಳಿಗಾಗಿ, ಸಮುಧಾಯದ ಏಳಿಗೆಗಾಗಿ ದುಡಿದವರು, ಸಮಾಜ ಸೇವಕರ ಬಗ್ಗೆ ತಿಳಿಸಲು.
3. ಸಹಾಯ ಸೇತುವೆ: ನಾಮಧಾರಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ, ಬಡರೋಗಿಗಳು ಚಿಕಿಸ್ಥೆಗೆ ಅಥವಾ ಸಂಘದವರು ಮಹತ್ಕಾರ್ಯಕ್ಕೆ ಧನ ಸಹಾಯಕ್ಕಾಗಿ ಅವರವರ ಬ್ಯಾಂಕ್ ಕತೆಯ ವಿವರಗಳೊಂದಿಗೆ ವಿಜ್ಞಾಪಣೆ ಮಾಡಬಹುದಾಗಿದೆ. (ಇದಕ್ಕಾಗಿ ಜಾತಿ ಪ್ರಮಾಣ ಪತ್ರ/ನಾಮಧಾರಿ ಸಂಘದ ಶಿಫಾರಸು, ಸಂಬಂಧ ಪಟ್ಟ ಬ್ಯಾಂಕ್ ದಾಖಲೆಗಳ ಅಗತ್ಯ ಇರುತ್ತದೆ).
ಈ ಎಲ್ಲ ಮಾಹಿತಿಯನ್ನು ಪ್ರಕಟಿಸಲು ಸಂಬಂಧ ಪಟ್ಟ ಫೋಟೋದೊಂದಿಗೆ ಕನ್ನಡದಲ್ಲಿ ವಿವರವನ್ನು ಟೈಪ್ ಮಾಡಿ ಅತಿಸುಲಭವಾಗಿ ವಾಟ್ಸಾಪ್ ಮೂಲಕ ಕಳುಹಿಸಿದರಾಯಿತು.