ಕರ್ನಾಟಕ ರಾಜ್ಯ ನಾಮಾಧಾರಿ ಯುವ ವೇದಿಕೆ ವತಿಯಿಂದ ಚೆಸ್ ಸ್ಪರ್ಧೆ
ಬೆಂಗಳೂರು : ಭಾನುವಾರ 12-1-2020 ರಂದು ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನಾಮಾಧಾರಿ ಯುವ ವೇದಿಕೆ (ರಿ) ವತಿಯಿಂದ ನಾಮಧಾರಿ ಸಮುದಾಯದ ಜನರಿಗಾಗಿ ಚೆಸ್ ಸ್ಪರ್ಧೆ ಏರ್ಪಡಿಸಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಕರ್ನಾಟಕ ಸಚಿವಾಲಯ ಕ್ಲಬ್ ನ ಚೆಸ್ ಹಾಲ್ ನಲ್ಲಿ ಈ ಏರ್ಪಡಿಸಲಾದ ಈ ಕಾರ್ಯಕ್ರಮಕ್ಕೆ, ನಾಮಧಾರಿ ಸಮಾಜದವರು ಸಹಕುಟುಂಬ ಸಮೇತರಾಗಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಕೊಳಿಸಬೇಕಾಗಿ ವೇದಿಕೆ ಅಧ್ಯಕ್ಷರಾದ ಗಣಪತಿ ಎಂ. ನಾಯ್ಕ ವಿನಂತಿಸಿಕೊಂಡಿದ್ದಾರೆ.
ಬೆಳಿಗ್ಗೆ 09-30 ಘಂಟೆಗೆ ಸ್ಪರ್ಧಾಳುಗಳಿಗೆ ನೊಂದಣಿ ಆರಂಭವಾಗಲಿದ್ದು, 10 ಗಂಟೆಗೆ ದೀಪಬೆಳಗಿಸುವ ಮೂಲಕ ಮುಖ್ಯ ಅತಿಥಿಗಳಿಂದ ಚೆಸ್ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಪ್ರತಿಷ್ಠಿತ ಬೆಂಗಳೂರು ಐಐಎಂ ಡೀನ್ ಆಗಿರುವ ಗೋಪಾಲ್ ನಾಯ್ಕ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವದನ್ನು ಖಚಿತ ಪಡಿಸಿದ್ದಾರೆ, ಎಂದು ಹೇಳಲಾಗಿದೆ.
ಮುಖ್ಯ ವೇದಿಕೆಯಲ್ಲಿ ಸಮುದಾಯದ ಜನರಿಂದ ಮನರಂಜನಾ ಕಾರ್ಯಕ್ರಮ, ಭರತನಾಟ್ಯ, ಯಕ್ಷಗಾನ ಪದಗಳು/ಜಾನಪದ ಗೀತೆಗಳು/ಭಾವಗೀತೆ/ಭಕ್ತಿ ಗೀತೆಗಳು ಇತ್ಯಾದಿ ಗಳನ್ನು ಆಯೋಜಿಸಲಾಗಿದೆ. 3-30 ರಿಂದ ಸ್ಪರ್ದೆಯ ವಿಜೇತರಿಗೆ ಬಹುಮಾನ ವಿತರಣೆಯ ಕಾರ್ಯಕ್ರಮ ನಡೆಯಲಿದೆ.