logo logo

ಕುಮಟಾ ಆರ್ಯ ಈಡಿಗ ನಾಮಧಾರಿ‌ ಸಂಘದ ವಾರ್ಷಿಕ ಮಹಾಸಭೆ

ಕುಮಟಾ : ಕುಮಟಾ ತಾಲ್ಲೂಕಿನ ಆರ್ಯ ಈಡಿಗ ನಾಮಧಾರಿ‌ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಇದೇ ಭಾನುವಾರ 29/12/2019ರಂದು ಬೆಳಿಗ್ಗೆ 10.30ಕ್ಕೆ ಕರೆಯಲಾಗಿದೆ.

ಇದೇ ಸಂದರ್ಭ ಆರ್ಯ ಈಡಿಗ ನಾಮಧಾರಿ ಸಮಾಜದ ವಧು-ವರರ ಅನ್ವೇಷಣಾ ಕೇಂದ್ರದ ಉದ್ಘಾಟನೆ ಕೂಡ ನಡೆಯಲಿದೆ. ವಧು-ವರ ನೋಂದಣಿಗೆ ಸಧ್ಯಕ್ಕೆ ರೂ.500/- ನಿಗದಿಪಡಿಸಲಾಗಿದೆ. ಸಂಭಂದಪಟ್ಟವರು ತಮ್ಮ ಮಾಹಿತಿಯನ್ನು ಈ ಕೇಂದ್ರದಲ್ಲಿ(ಕಚೇರಿ) ನೊಂದಾಯಿಸಿ, ಪುನಃ ಅಲ್ಲಿ ಸಂಪರ್ಕಿಸಿ ಇತರರ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡುವ ಉದ್ದೇಶ ಹೊಂದಿದೆ, ಎಂದು ಸಂಘದ ನಿರ್ದೇಶಕರಾದ ಸಂತೋಷ ನಾಯ್ಕ ತಿಳಿಸಿದ್ದಾರೆ.

ಈ ಎರಡೂ ಕಾರ್ಯಕ್ರಮದಲ್ಲಿ ನಾಮಧಾರಿ ಸಮಾಜದ ಮುಖಂಡರು, ಸಂಘದ ಸರ್ವ ಸದಸ್ಯರು ಹಾಜರಿರಬೇಕೆಂದು ಸಂಘದ ಅಧ್ಯಕ್ಷರಾದ ಸುಬ್ರಾಯ ನಾಯ್ಕರು ಮತ್ತು ಸಂಘದ ಪದಾಧಿಕಾರಿಗಳು ವಿನಂತಿಸಿದ್ದಾರೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್