ಬೆಂಗಳೂರು ನಾಮಧಾರಿ ಸಂಘದ ವಾರ್ಷಿಕೋತ್ಸವ : 1.07ಲಕ್ಷ ಮೊತ್ತದ ಪ್ರತಿಭಾ ಪುರಸ್ಕಾರ ವಿತರಣೆ
ಬೆಂಗಳೂರು : ನಿನ್ನೆ ಭಾನುವಾರ ಬೆಂಗಳೂರಿನ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ) ದಲ್ಲಿ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2019 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ನಾಮಧಾರಿ ಸಮಾಜದ ಹೆಮ್ಮೆಯ ಮಗಳು ಕುಮಾರಿ ನಾಗಾಂಜಲಿ ಪ.ನಾಯ್ಕ ಅವರಿಗೆ ಪ್ರತಿಭಾ ಪುರಸ್ಕಾರವಾಗಿ ರೂ.35,000/- ಚೆಕ್ ನೊಂದಿಗೆ ಶಾಲು ಹೊದಿಸಿ ಹೂವು, ಹಣ್ಣು ನೀಡಿ ಸನ್ಮಾನಿಸಲಾಯಿತು.
ಇದೆ ಸಂದರ್ಭದಲ್ಲಿ ಸಂಘದ ವತಿಯಿಂದ, ಸಂಘಕ್ಕಾಗಿ, ಸಂಘದ ಸರ್ವತೋಮುಖ ಅಭಿವೃದ್ಧಿ ಗಾಗಿ ದುಡಿದ ಗೌರವಾನ್ವಿತ ಹಿರಿಯ ಸದಸ್ಯರಾದ ಶ್ರೀ ರೋಹಿದಾಸ್ ಎಸ್ ನಾಯ್ಕ ನಿವೃತ್ತ ಅಬಕಾರೀ ಇಲಾಖೆಯ ಉಪ ಆಯುಕ್ತರು, ಶ್ರೀಮತಿ ಮಿತ್ರಾ ಎಸ್. ನಾಯ್ಕ ನಿವ್ರತ್ತ ಶಿಕ್ಷಕರು, ಶ್ರೀ ಎಂ.ಟಿ.ನಾಯಕ ನಿವೃತ್ತ ಡಿಸಿಪಿ ಹಾಗೂ ಶ್ರೀ ಎಸ್.ಎಚ್.ನಾಯಕ ನಿವೃತ್ತ ಐ.ಐ.ಎಮ್.ಬೆಂಗಳೂರು ಅಧಿಕಾರಿ., ದಂಪತಿಗಳಿಗೆ ಶಾಲು ಹೊದಿಸಿ ಹೂವು, ಹಣ್ಣು ನೀಡಿ ಗೌರವವಿಸಲಾಯಿತು.
ಅಧ್ಯಕ್ಷರಾದ ಟಿ.ಎಚ್.ನಾಯಕ್ ಅವರು ವಿದೇಶ ಪ್ರವಾಸದಲ್ಲಿದ್ದ ಕಾರಣ ಉಪಾಧ್ಯಕ್ಷರಾದ ರಾಮದಾಸ್ ಯು.ನಾಯ್ಕ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಾಗವಹಿಸಿದ್ದ ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ದ್ವಿತಿಯ ರಾಂಕ್ ಪಡೆದಿರುವ ಚಿ. ಮೇಘನಾ ಅವರನ್ನು ಪ್ರಶಂಸಿಸಲಾಯಿತು.
ಇದಲ್ಲದೆ, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ 39 ವಿದ್ಯಾರ್ಥಿಗಳಿಗೆ, ಸಿಬಿಎಸ್ಸಿ ಪರೀಕ್ಷೆಯ 4 ವಿದ್ಯಾರ್ಥಿಗಳಿಗೆ ಹಾಗೂ ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ 17 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ವರ್ಷ ನಾಮಧಾರಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಒಟ್ಟು ರೂ.1,07,000/- ಗಳಷ್ಟು ಮೊತ್ತದ ಪುರಸ್ಕಾರ ನೀಡಿ ಗೌರವಿಸಲಾಗಿದೆ.