ಸಮಾಜ ಸೇವಕ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಗೆ ಡಾಕ್ಟರೇಟ್ ಗೌರವ
ಬೆಂಗಳೂರು : ಹಿರಿಯ ರಾಜಕಾರಿಣಿ ಹಾಗೂ ಸಮಾಜ ಸೇವಕರಾದ ಶ್ರೀ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಅವರಿಗೆ ಪ್ರತಿಷ್ಟಿತ ಡಾಕ್ಟರೇಟ್ ಗೌರವ ಲಭಿಸಿದೆ. ಎಂ.ಎಸ್.ನಾಯ್ಕ ಅವರ ಸಮಾಜ ಪರ ಕಾಳಜಿಯನ್ನು ಗುರುತಿಸಿ ದಿ ಇಂಟರ್ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ, ಯು.ಎಸ್.ಎ., ವತಿಯಿಂದ ಈ ಗೌರವಯುತ ಡಾಕ್ಟರೇಟ್ ನೀಡಲಾಗಿದೆ. ಕಳೆದ ಭಾನುವಾರ ಜುಲೈ 28ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ನಡೆದ ಪದವಿ ಪ್ರಧಾನ ಸಮಾರಂಭದಲ್ಲಿ ಎಂ.ಎಸ್.ನಾಯ್ಕ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಯಿತು.
ಬ್ರಾಹ್ಮಣರ ಪ್ರಾಬಲ್ಯವೇ ಹೆಚ್ಚಿರುವ ಮಂಚಿಕೇರಿಯ ಇವರ ಕುಟುಂಬದ ಸದಸ್ಯರು ಸಮಾಜ ಸೇವೆಗೆ ಹೆಸರಾಗಿದ್ದು ಸ್ಥಳಿಯರಿಂದ ಗೌಡರ ಮನೆ ಎಂದೇ ಕರೆಯಲ್ಪಡುವುದು. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರೊಂದಿಗೆ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಸಣ್ಣತಮ್ಮ ಸುಬ್ರಾಯ್ ನಾಯ್ಕ ಅವರ ನಿಧನದ ನಂತರ, ಆಗ ಯುವಕರಾಗಿದ್ದ ಸಹೋದರರಾದ ವೆಂಕಟರಮಣ ಸುಬ್ರಾಯ್ ನಾಯ್ಕ(ವಿ.ಎಸ್.ನಾಯ್ಕ) ಹಾಗೂ ಕಿರಿಯ ಸಹೋದರ ಮಾದವ ಸುಬ್ರಾಯ್ ನಾಯ್ಕ(ಎಂ.ಎಸ್.ನಾಯ್ಕ) ಸಮಾಜ ಸೇವೆಯನ್ನು ಪ್ರಾರಂಭಿಸಿದ್ದರು.
ಎಂ.ಎಸ್.ನಾಯ್ಕ ಅವರು ಕಾಲೇಜು ದಿನಗಳಿಂದಲೇ ಅನೇಕ ಹೋರಾಟದಲ್ಲಿ ಪಾಲ್ಗೊಂಳ್ಳಲು ಪ್ರಾರಂಭಿಸಿ, ಕೈಗಾ, ಮಾಗೋಡು ಜಲಾಶಯ ಸೇರಿದಂತೆ ಅನೇಕ ಪರಿಸರ ಹಾಗೂ ಸಮಾಜ ಪರ ಹೋರಾಟದಲ್ಲಿ ಗುರುತಿಸಲ್ಪಟ್ಟಿದ್ದರು. ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಗುರುತರ ಹುದ್ದೆಗಳನ್ನು ನಿಭಾಯಿಸಿದ ಇವರು, ಜಿಲ್ಲಾ ಕಾಂಗ್ರೆಸ್ ರೈತ ಸಂಘದ ಅಧ್ಯಕ್ಷರಾಗಿದ್ದರು. ಅಲ್ಲದೆ, ಎಸ್.ಬಂಗಾರಪ್ಪ ಅವರೊಂದಿಗೆ ಜೆಡಿಎಸ್ ಸೇರ್ಪಡೆಗೊಂಡು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.