ಜಿಲ್ಲಾ ನಾಮಧಾರಿ ನೌಕರರ ಸಂಘದಿಂದ ವಾರ್ಷಿಕ ಸಮ್ಮೇಳನ
ಸಿರ್ಸಿ : ನಿನ್ನೆ ರವಿವಾರ 28 ಜುಲೈರಂದು ಶಿರಸಿಯ ಶ್ರೀ ರಾಘವೇಂದ್ರ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ವಾರ್ಷಿಕ ಸ್ನೇಹ ಸಮ್ಮೇಳನ , ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಕೆ.ನಾಯ್ಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ನ್ಯಾಯಾಧೀಶರಾದ ಶ್ರೀಮತಿ ರೂಪಾ ನಾಯ್ಕ, ಶ್ರೀ ಮಂಜುನಾಥ್ ಕೆ. ಡಿಡಿಪಿಐ, ಕಾರವಾರ, ಶ್ರೀ ಯು.ಡಿ.ನಾಯ್ಕ ಡಿಎಫ್ಓ ಶಿರಸಿ ಮತ್ತು ವಿಜಯಲಕ್ಷ್ಮಿ ಎಂ. ನಾಯ್ಕ ಪ್ರಾಚಾರ್ಯರು ಹೊನ್ನಾವರ ಅವರು ಆಗಮಿಸಿದ್ದರು.
ಸಂಘದ ಅಧ್ಯಕ್ಷರಾದ ಡಾ.ನಾಗೇಶ್ ಎಚ್. ನಾಯ್ಕ ಕಾಗಾಲ್(ಡೀನ್, ತೋಟಗಾರಿಕೆ ವಿಶ್ವವಿದ್ಯಾಲಯ ಬಾಗಲಕೋಟೆ) ಅವರು ಮುಖ್ಯಅತಿಥಿಗಳನ್ನು ಮತ್ತು ಸಭೆಗೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.

ಈ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ನಾಮಧಾರಿ ಸಮಾಜದ ಹೆಮ್ಮೆಯ ಮಗಳು ಕುಮಾರಿ ನಾಗಾಂಜಲಿ ನಾಯ್ಕ ಗೆ ಸನ್ಮಾನ ಮಾಡಿಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಮಾಜದ ಇತರೆ ಪ್ರತಿಭೆಗಳಿಗೂ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗಿದೆ.