ದೇವರಾಜ ನಾಯ್ಕಗೆ ಒಲಿದ ಕ್ರಿಯಾಶೀಲ ಯುವ ಪತ್ರಕರ್ತ ಸನ್ಮಾನ
ಕಾರವಾರ : ಕಾರವಾರದ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಕ್ರಿಯಾಶೀಲ ಯುವ ಪತ್ರಕರ್ತ ಪ್ರಶಸ್ತಿಯು ಈ ಬಾರಿ ನಮ್ಮ ನಾಮಧಾರಿ ಸಮಾಜದ ಯುವ ಪತ್ರಕರ್ತ ದೇವರಾಜ ನಾಯ್ಕ ಅವರ ಮುಡಿಗೇರುವುದು, ನಾಮಧಾರಿ ಸಮಾಜಕ್ಕೆ ಹೆಮ್ಮೆಯ ವಿಷಯವಾಗಿದೆ.
ಜುಲೈ 1ರಂದು ಕಾರವಾರದ ಚಿತ್ತಾಕುಲದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಹಿಮಂತರಾಜು ಜಿ.ರವರು ದೇವರಾಜ ನಾಯ್ಕ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ, ಚಿತ್ತಾಕುಲ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ತಾಂಡೇಲ ಸೇರಿದಂತೆ ಅನೇಕರು ಇದ್ದರು.
ಭಟ್ಕಳ ತಾಲೂಕಿನ ಹನುಮಾನನಗರದವರಾದ ಅವರು, ಅತಿ ಚಿಕ್ಕ ವಯಸ್ಸಿನಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ತಮ್ಮದೇ ಸ್ವಂತ ಸುದ್ದಿ ಸಂಸ್ಥೆ ಯುವಾಗ್ನಿ ನ್ಯೂಸ್ ಪೋರ್ಟಲ್ ಮೂಲಕ ಮಾಧ್ಯಮ ರಂಗಕ್ಕೆ ಸೇರಿದ ಅವರು, ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಚಾನೆಲ್ ಗಳಲ್ಲಿ ಒಂದಾದ ನೂತನ ಟಿವಿಗೆ ಕುಮಟಾ ವರದಿಗಾರರಾಗಿ ಕೆಲವು ಕಾಲ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ, ದಿ ಪ್ರಿಂಟರ್ಸ್ ಮೈಸೂರ್ ಪ್ರೈವೇಟ್ ಲಿ. ನ ಪ್ರಜಾವಾಣಿ ಹಾಗೂ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕಾರವಾರದಲ್ಲಿ ಅರೆಕಾಲಿಕ ವರದಿಗಾರರಾಗಿರುವ ಅವರು, ಹಲವು ಸಾಮಾಜಿಕ, ಅಭಿವೃದ್ಧಿ ಪರ, ಆಹಾರೋತ್ಪನ್ನ, ವನ್ಯಜೀವಿ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲಿನ ವರದಿಗಳನ್ನು ಮಾಡಿದ್ದಾರೆ. ಜತೆಗೆ, ಅನೇಕ ಸುದ್ದಿ ಸಂಸ್ಥೆಗಳಿಗೂ ಫ್ರೀಲ್ಯಾನ್ಸರ್ ಆಗಿ ಕಾರ್ಯನಿರ್ವಹಿಸಿರುವ ಅನುಭವವೂ ಅವರಿಗಿದೆ.
ಅವರ ನೇತೃತ್ವದಲ್ಲಿ, ಸುದ್ದಿ ಕನ್ನಡ ನ್ಯೂಸ್ ಪೋರ್ಟಲ್, ಕೂಡ ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದು, ಅತಿ ಚಿಕ್ಕ ವಯಸ್ಸಿನಲ್ಲೇ ಮಾಧ್ಯಮ ರಂಗದಲ್ಲಿ ಸಾದನೆ ಮಾಡಿದ ಅವರನ್ನು ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘ ಗುರುತಿಸಿ ಸನ್ಮಾನಿಸಿ ಗೌರವಿಸಿದೆ.