ಸಮಾಜದ ಹೆಮ್ಮೆಯ ನಾಗಾಂಜಲಿ ನಾಯ್ಕ SSLCಯಲ್ಲಿ ರಾಜ್ಯಕ್ಕೆ ಪ್ರಥಮ
ಬೆಂಗಳೂರು : ಸಮಾಜದ ಅನೇಕ ಪ್ರತಿಭಾವಂತ ವಿಧ್ಯಾರ್ಥಿಗಳ ಹಲವು ದಿನಗಳ/ವರ್ಷಗಳ ಕನಸು ಇಂದು ನೆರವೇರಿಸಿದ ಶ್ರೇಯಸ್ಸು ನಾಗಾಂಜಲಿ ಗೆ ಸಲ್ಲುತ್ತದೆ. ನಾಮಧಾರಿ ಸಮಾಜದ ಅಡ್ಡ ಹೆಸರು ರಾಜ್ಯದಾದ್ಯಂತ ಇಂದು ಎಲ್ಲರ ಬಾಯಲ್ಲೂ ಬರುವಂತೆ ಮಾಡಿದ ನಾಗಾಂಜಲಿ, ಕುಮಟಾ ಬಾಡ ಗ್ರಾಮದ ಹುಬ್ಬುಣಗೇರಿ ನಿವಾಸಿಯಾಗಿರುವ ಪರಮೇಶ್ವರ ನಾಯ್ಕ ಹಾಗೂ ಚೇತನಾ ನಾಯ್ಕ ದಂಪತಿಯ ಪುತ್ರಿ ನಾಗಾಂಜಲಿ ಈಗ ರಾಜ್ಯದ ಮನೆಮಾತಾಗಿದ್ದಾಳೆ.

ಅನೇಕ ವರ್ಷ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ, ನಾಗಾಂಜಲಿ ತಂದೆ ಪರಮೇಶ್ವರ ಅವರು 2006ರಲ್ಲಿ ನಿವೃತ್ತಿ ಪಡೆದಿದ್ದರು. ಸದ್ಯಕ್ಕೆ, ತಮ್ಮ ಊರು ಕುಮಟಾಕ್ಕೆ ಮರಳಿ ಹಲವು ವರ್ಷಗಳಿಂದ ಸ್ವಂತ ಟೆಂಪೊವೊಂದನ್ನು ಹೊಂದಿದ್ದು, ಉದ್ಯೋಗ ನಡೆಸುತ್ತಿದ್ದಾರೆ.
625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿರುವ ನಾಗಾಂಜಲಿ ನಾಯ್ಕ, ಕುಮಟಾದ ಕಲಭಾಗದಲ್ಲಿರುವ, ಕೊಲಬಾ ವಿಠೋಬಾ ಶಾನಭಾಗ ಕಲಭಾಗಕರ್ ಹೈಸ್ಕೂಲ್ ನ (ಸಿವಿಎಸ್ ಕೆ) ವಿದ್ಯಾರ್ಥಿನಿ. ತಮ್ಮ ಶಾಲೆಗೆ ಕೀರ್ತಿ ತಂದಿರುವ ತಮ್ಮ ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ ಳನ್ನು ಬಾಯ್ತುಂಬ ಕೊಂಡಾಡಿರುವ ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಪ್ರಭು ಅವರು, ನಾಗಾಂಜಲಿ ರಾಂಕ್ ಬರುತ್ತಾಳೆಂಬ ಪೂರ್ತಿ ವಿಶ್ವಾಸ ನಮಗೂ ಹಾಗೂ ಅವಳಿಗೂ ಇತ್ತು. ಆಕೆ ಅತ್ಯಂತ ಪ್ರತಿಭಾವಂತ ಮತ್ತು ಅಷ್ಟೇ ನಿಷ್ಠೆಯ ವಿದ್ಯಾರ್ಥಿನಿ, ಎಂದು ಹೆಮ್ಮೆ ವ್ಯಕ್ತ ಪಡಿಸಿದ್ದಾರೆ.
ನಾಮಧಾರಿ ಸಮಾಜದ ಮಗಳು ನಾಗಾಂಜಲಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯುವ ಮೂಲಕ ನಮ್ಮ ಸಮಾಜದ ಕೀರ್ತಿ ಪತಾಕೆ ಎಲ್ಲೆಡೆ ಹಾರುವಂತೆ ಮಾಡಿದ್ದಾಳೆ. ಅವಳು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ ಸಮಾಜಕ್ಕೆ ಹಾಗೂ ದೇಶಕ್ಕೆ ಕೀರ್ತಿ ತರಲಿ ಎಂದು ನಾಮಧಾರಿ.ಕಂ ತಂಡ ಹಾರೈಸುತ್ತದೆ.