logo logo

ಉ.ಕ. ಜಿಲ್ಲಾ ನಾಮಧಾರಿ ಸಂಘದ ವಾರ್ಷಿಕ ಸ್ನೇಹ ಸಮ್ಮೇಳನ

ಕಾರವಾರ : ಉತ್ತರ ಕನ್ನಡ ಜಿಲ್ಲಾ ನಾಮಧಾರಿ ಅಭಿವೃದ್ದಿ ಸಂಘ (ರಿ), ಕಾರವಾರ ಈ ತಿಂಗಳ 27ರಂದು ಭಾನುವಾರ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಂಡಿದ್ದಾರೆ. ನಗರದ ಹಬ್ಬುವಾಡಾ ಗಣಪತಿ ದೇವಸ್ಥಾನದ ಬಳಿ ಇರುವ ಅರುಣೋದಯ ಸಭಾಭವನದಲ್ಲಿ ಈ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಲಿದೆ.

ಈ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಈ ವರ್ಷ ಯಕ್ಷಗಾನ ಕಲಾವಿದರಾದ ಹೊನ್ನಾವರ ಮಂಕಿ ಗ್ರಾಮದ ಈಶ್ವರ ಹನುಮಂತ ನಾಯ್ಕ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆಗೈದ ಸಿದ್ದಾಪುರದ ಕುಮಾರಿ ಲಲಿತಾ ಅಜ್ಜಪ್ಪ ನಾಯ್ಕರನ್ನು ಸನ್ಮಾನಿಸುವ ಉದ್ದೇಶವಿದೆ. ಬೆಳಿಗ್ಗೆ 11 ಗಂಟೆಯಿಂದ ಆರಂಭಗೊಳ್ಳುವ ಈ ಸ್ನೇಹ ಸಭಾ ಸಮ್ಮೇಳನದಲ್ಲಿ ಮಧ್ಯಾಹ್ನ ಊಟದ ಬಳಿಕ, ಸಮುದಾಯದ ಮಹಿಳೆಯರಿಗಾಗಿ ಅರಿಶಿನ ಕುಂಕುಮ ಕಾರ್ಯಕ್ರಮವೂ ಹಮ್ಮಿಕೊಂಡಿರುವುದು ವಿಶೇಷ.

ಸಂಘದ ಅಧ್ಯಕ್ಷರಾದ ವಿಜಯಕುಮಾರ್ ಆರ್. ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದ ಉದ್ಘಾಟನೆಯನ್ನು ಬೆಂಗಳೂರಿನ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಜಗದೀಶ್ ಡಿ. ನಾಯ್ಕ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಉದಯ ಎಂ. ನಾಯ್ಕ ಹಾಗೂ ಸಹಾಯಕ ಪ್ರಾದೇಶಿಕ ಅಧಿಕಾರಿಗಳಾದ ಸಿ.ಡಿ.ನಾಯ್ಕ ಆಗಮಿಸಲಿದ್ದಾರೆ. ಅಲ್ಲದೆ ಎಲ್ಲಾ ತಾಲೂಕುಗಳ ನಾಮಧಾರಿ ಸಂಘಗಳ ಅಧ್ಯಕ್ಷರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ.

ನಾಮಧಾರಿ ರುಚಿ

MORE RECIPE...

ಬ್ಲಾಗ್